೧೦೦೦ ಮೆಘಾವಾಟ್ ಸೌರ ವಿದ್ಯುತ್ ಉತ್ಪಾದಿಸುವ ಗುರಿ
ಕಾಸರಗೋಡು: ರಾಜ್ಯದಲ್ಲಿ ಸೌರ ಸ್ಥಾವರಗಳ ಮೂಲಕ ೧೦೦೦ ಮೆಘಾವಾಟ್ ವಿದ್ಯುತ್ ಉತ್ಪಾದಿ ಸುವ ಗುರಿಯನ್ನು ರಾಜ್ಯ ವಿದ್ಯುನ್ಮಂಡಳಿ ಹಾಕಿಕೊಂಡಿದೆ. ಮನೆಗಳ ಮೇ ಲ್ಛಾವಣಿ ಮೂಲಕ ಸೌರ ಪ್ಯಾನಲ್ ಗಳನ್ನು ಸ್ಥಾಪಿಸಿ ಆ ಮೂಲಕ ೫೦೦ ಮೆಘಾವಾಟ್ ಉತ್ಪಾದಿಸುವ ಯೋ ಜನೆ ಹಾಕಿಕೊಳ್ಳಲಾದರೂ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗದೆ ಅದನ್ನೂ ಮೀರಿ ಈಗ ೫೪೧ ಮೆಘಾ ವಾಟ್ ಮೂರು ಕಿಲೋ ವಾಟ್ ತನಕ ಸೌರ ವಿದ್ಯುತ್ ಉತ್ಪಾದಿಸಲು ತಗಲುವ ಖರ್ಚಿ ನಲ್ಲಿ ಶೇ. ೪೦ರಷ್ಟು ಸಬ್ಸಿಡಿಯೂ ಲಭಿಸು ತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾ ರಗಳ ಮೂಲಕ ಈ ಸಬ್ಸಿಡಿ ನೀಡ ಲಾಗುತ್ತಿದೆ. ಮೂರು ಮೆಘಾವಾ ಟ್‌ಗಿಂತಲೂ ಹೆಚ್ಚು ವಿದ್ಯುತ್ ಉತ್ಪಾದಿಸುವ ಘಟಕಗಳಿಗೆ ಶೇ. ೨೦ರಷ್ಟು ಸಬ್ಸಿಡಿ ಲಭಿಸುತ್ತಿದೆ. ೨೦೨೨-೨೩ನೇ ವರ್ಷದಲ್ಲಿ ಸೌರ ವಿದ್ಯುತ್ ಉತ್ಪಾ ದನೆಯಲ್ಲಿ ಕೇರಳ ಶೇ. ೧೫ಕ್ಕಿಂತ ಹೆಚ್ಚು ಬೆಳವಣಿಗೆ ದರ ಉಂಟಾಗಿದೆ. ಆದರೆ ಇತರ ರಾಜ್ಯಗಳಲ್ಲಿ ಈ ಬೆಳವಣಿಗೆ ಶೇ. ೧೦ಕ್ಕಿಂತಲೂ ಕೆಳಗಿದೆ.