ಆಸ್ಪತ್ರೆ ಕಟ್ಟಡದಿಂದ ಬಿದ್ದ್ದು ನೌಕರನಿಗೆ ಗಂಭೀರ

0
34

ಬದಿಯಡ್ಕ: ಇಲ್ಲಿನ ಸಾಮಾಜಿಕ ಆರೋಗ್ಯ ಕೇಂದ್ರದ ಕಟ್ಟಡದ ಮೇಲಿನಿಂದ ಬಿದ್ದ ನೌಕರನೋರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ನೀರ್ಚಾಲು ಮೇಲಿನ ಪೇಟೆ ನಿವಾಸಿ ಶ್ಯಾಮ (೩೯) ಎಂಬವರು ಗಾಯಗೊಂಡಿದ್ದು, ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಶ್ಯಾಮ ಬದಿಯಡ್ಕ ಸಿ.ಎಚ್.ಸಿ.ಯ ಶುಚೀಕರಣ ವಿಭಾಗದಲ್ಲಿ ದಿನಕೂಲಿ ನೌಕರನಾಗಿದ್ದಾರೆ. ನಿನ್ನೆ ಮಧ್ಯಾಹ್ನ ವೇಳೆ ಆಸ್ಪತ್ರೆ ಕಟ್ಟಡದ ಮೂರಂತಸ್ತಿನ ಮೇಲೆ ಕೆಲಸ ವೇಳೆ ಆಕಸ್ಮಿಕ ಕಾಲು ಜಾರಿ ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ.

NO COMMENTS

LEAVE A REPLY