ಯುವಕ ನೇಣು ಬಿಗಿದು ಆತ್ಮಹತ್ಯೆ

0
259

ಉಪ್ಪಳ: ಬಾಯಾರು ಬಳಿಯ ಕನಿಯಾಲ ಚಾಕಟೆಗುಳಿ ನಿವಾಸಿ ಸಿ.ಎಚ್. ಪ್ರಭಾಕರರ ಪುತ್ರ ವಿಜಯ (೩೩) ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೊನ್ನೆ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದ ವಿಜಯ ನಿನ್ನೆ ಬೆಳಿಗ್ಗಿನಿಂದ ನಾಪತ್ತೆಯಾಗಿದ್ದರು. ಹುಡುಕಾಡುತ್ತಿದ್ದಂತೆ ಮನೆ ಬಳಿಯ ಮರಕ್ಕೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಸೀತಾಂಗೋಳಿಯ ಮರದ ಮಿಲ್‌ನಲ್ಲಿ ಕೆಲಸ ನಿರ್ವಹಿ ಸುತ್ತಿದ್ದರು. ಆತ್ಮಹತ್ಯೆಗೆ ಕಾರಣ ವೇನೆಂದು ತಿಳಿದಿಲ್ಲ. ಕಾಸg ಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತ ದೇಹವನ್ನು ಮನೆ ಬಳಿ ಅಂತ್ಯ ಸಂಸ್ಕಾರ ನಡೆಸಲಾ ಯಿತು. ಮೃತರು ತಂದೆ, ತಾಯಿ ಭಾಗಿ, ಸಹೋದರಿ ಯರಾದ ಶಶಿಕಲ, ತ್ರಿವೇಣಿ, ಲತಾ ಮೊದಲಾದವರನ್ನು ಅಗಲಿದ್ದಾರೆ.

NO COMMENTS

LEAVE A REPLY