ಅಂಗಡಿ ಕಳವು ಆರೋಪಿ ಸೆರೆ

ಕುಂಬಳೆ:  ಬಂದ್ಯೋಡಿನಲ್ಲಿ ಅಂಗಡಿ ಕಳವು ನಡೆಸಿದ ಆರೋಪಿಯನ್ನು ಎಸ್‌ಐ ವಿ.ಕೆ. ಅನೀಶ್ ಸೆರೆಹಿಡಿದಿದ್ದಾರೆ. ಬಂದ್ಯೋಡು ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಖಾಸಿಂ (೪೦) ಬಂಧಿತ ಆರೋಪಿಯಾಗಿದ್ದಾನೆ. ಕಳೆದ ಗುರುವಾರ ರಾತ್ರಿ ಬಂದ್ಯೋಡು ಪೇಟೆಯಲ್ಲಿರುವ ಸಿ.ಎ. ಸ್ಟೋರ್‌ನ ಬೀಗ ಮುರಿದು ಒಳನುಗ್ಗಿ ೮೦೦೦ ರೂಪಾಯಿಗಳ  ಸಾಮಗ್ರಿಗಳನ್ನು ಕಳವುಗೈಯ್ಯಲಾಗಿತ್ತು. ಈ ಬಗ್ಗೆ  ಮಾಲಕ ಸುಬೈರ್ ಅಡ್ಕ ಪೊಲೀಸರಿಗೆ ದೂರು ನೀಡಿದ್ದರು.

Leave a Reply

Your email address will not be published. Required fields are marked *

You cannot copy content of this page