ಅಂಗಡಿ ಮಾಲಕನ ಫೋನ್ ಕಳವುಗೈದ ಆರೋಪಿ ಸೆರೆ
ಕಾಸರಗೋಡು: ಸಾಮಗ್ರಿ ಖರೀದಿಸಲೆಂಬ ನೆಪವೊಡ್ಡಿ ಅಂಗಡಿಗೆ ತಲುಪಿ ಅಂಗಡಿಯ ಮಾಲಕನ ಮೊಬೈಲ್ ಫೋನ್ ಕಳವುಗೈದ ಆರೋಪಿ ಸೆರೆಗೀಡಾಗಿದ್ದಾನೆ. ಕಣ್ಣೂರು ಅಳಿಕ್ಕೋಡ್‌ನ ಜಾಸಿಲ್ (೨೫) ಎಂಬಾತನನ್ನು ಬೇಕಲ ಠಾಣೆ ಇನ್‌ಸ್ಪೆಕ್ಟರ್ ಯು.ಪಿ. ವಿಪಿನ್ ಸೆರೆಹಿಡಿದಿದ್ದಾರೆ.
ಬೇಕಲ ಬಳಿಯ ಚೇಟುಕುಂಡಿನಲ್ಲಿರುವ ಮದೀನ ಸುಪರ್ ಮಾರ್ಕೆಟ್ ಮಾಲಕ ಪೂಚಕ್ಕಾಡ್ ತೆಕ್ಕುಪುರದ ಮೊಹಮ್ಮದ್ ರಫೀಕ್‌ರ ೩೦ ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಫೋನ್ ಕಳೆದ ತಿಂಗಳ ೧೮ರಂದು ಕಳವಿಗೀಡಾಗಿತ್ತು. ಅಂಗಡಿಯಿಂದ ಸಾಮಗ್ರಿ ಖರೀದಿಸಲೆಂದು ತಿಳಿಸಿ ತಲುಪಿದ ಆರೋಪಿ ಅಂಗಡಿ ಮಾಲಕನ ಗಮನ ಬೇರೆಡೆಗೆ ಸೆಳೆದು ಮೊಬೈಲ್ ಲಪಟಾಯಿಸಿದ್ದನು. ಸ್ವಿಫ್ಟ್ ಕಾರಿನಲ್ಲಿ ತಲುಪಿದ ಆರೋಪಿಯ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕಳವು ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.