ಅಂತಾರಾಷ್ಟ್ರೀಯ ಮಹಿಳಾ ದಿನದಂಗವಾಗಿ ಜಿ.ಪಂ. ಅಧ್ಯಕ್ಷೆಗೆ ಗೌರವ
ಕಾಸರಗೋಡು: ಅಂತಾರಾಷ್ಟ್ರೀಯ ಮಹಿಳಾ ದಿನದಂಗವಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ. ಬೇಬಿ ಬಾಲ ಕೃಷ್ಣನ್‌ರನ್ನು ಅಭಿನಂದಿಸಲಾಯಿತು. ಪಿ.ವಿ. ದಿವಾಕರನ್ ಸನ್ಮಾನಿಸಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು ಅಧ್ಯಕ್ಷತೆ ವಹಿಸಿದರು. ಕೆ. ಶಕುಂತಳ, ಶೈಲಜಾ ಭಟ್, ಜಾಸ್ಮಿನ್ ಕಬೀರ್, ಫಾತಿಮತ್ ಶಮ್ನಾ, ಎಂ.ಎಸ್. ಶಬರೀಶ್, ವಿ.ಎಂ. ಅಖಿಲ, ಎನ್.ವಿ. ಸತ್ಯನ್, ಕೆ. ಬಾಲಕೃಷ್ಣನ್ ಮಾತನಾಡಿದರು.