ಅಕ್ಕಿ ಬೆಲೆ ಗಗನದತ್ತ: ಸಪ್ಲೈಕೋದಲ್ಲಿ ಅಕ್ಕಿ ಖಾಲಿ
ತಿರುವನಂತಪುರ: ಸಾರ್ವಜನಿಕ ಮಾರುಕಟ್ಟೆಗಳಲ್ಲಿ ಅಕ್ಕಿಯ ದರ ಗಗನದತ್ತ ಮುಖ ಮಾಡಿರುವಾಗ ಸಪ್ಲೈಕೋದಲ್ಲಿ ಅಕ್ಕಿಯ ಸಂಗ್ರಹ ಶೂನ್ಯವಾಗಿದೆ. ೪ರಿಂದ ೫ ರೂ.ವರೆಗೆ ಕೆಲವು ವಿಧದ ಅಕ್ಕಿಗೆ ಮಾರುಕಟ್ಟೆಯಲ್ಲಿ ಹೆಚ್ಚಳ ಉಂಟಾಗಿರುವುದು.
ಸಪ್ಲೈಕೋದಲ್ಲಿ ಇತ್ತೀಚೆಗೆ ಟೆಂಡರ್ಗಳೆಲ್ಲಾ ಮೊಟಕಾಗಿದೆ. ಸಬ್ಸಿಡಿಯಿರುವ ೧೩ ವಿಧದ ಸಾಮಗ್ರಿಗಳಿಗೆ ಟೆಂಡರ್ ನೀಡಲು ಯಾರೂ ಸಿದ್ಧರಾಗಿಲ್ಲ. ಇದರಿಂದಾಗಿ ಇನ್ನೊಮ್ಮೆ ಟೆಂಡರ್ ಕರೆಯಬೇಕೆಂದು ಹೇಳಲಾಗುತ್ತಿ ದ್ದರೂ ಬಾಕಿ ಉಳಿದಿರುವ ಮೊತ್ತದ ಅಲ್ಪಾಂಶವಾದರೂ ಸಿಗದ ಕಾರಣ ಟೆಂಡರ್ನಲ್ಲಿ ಭಾಗವಹಿಸುವು ದಿಲ್ಲವೆಂದು ಕಂಪೆನಿಗಳು, ಏಜೆನ್ಸಿಗಳು ತಿಳಿಸುತ್ತವೆ.
ಜಯ ಅಕ್ಕಿ (೨೪), ಕುರುವ (೨೫), ಮಟ್ಟ (೨೪), ಬೆಳ್ತಿಗೆ (೨೩) ಎಂಬೀ ರೀತಿಯಲ್ಲಿ ಸಪ್ಲೈಕೋದಿಂದ ಅಕ್ಕಿ ಲಭಿಸುತ್ತಿತ್ತು. ಆದರೆ ಮುಕ್ತ ಮಾರುಕಟ್ಟೆಯಲ್ಲಿ ೫೦ ರೂ.ಗೂ ಅಧಿಕವಾಗಿದೆ. ಓಣಂ, ಕ್ರಿಸ್ಮಸ್ ಮೇಳಗಳಿಗಾಗಿ ನಡೆಸಿದ್ದ ಅಕ್ಕಿ ಸಂಗ್ರಹ ಮುಗಿದ ಕಾರಣ ಸಪ್ಲೈಕೋದಲ್ಲಿ ಅಕ್ಕಿ ಕ್ಷಾಮ ತಲೆದೋರಿದೆ.
ಅಕ್ಕಿ ನೀಡಿದ ಆಂಧ್ರದ ಕಂಪೆನಿಗಳಿಗೆ ೬೦ ಕೋಟಿ ರೂ. ಸಪ್ಲೈಕೋ ನೀಡಲಿದೆ. ಸಕ್ಕರೆ ಕಂಪೆನಿಗಳಿಗೂ ಇಷ್ಟೇ ಮೊತ್ತ ನೀಡಲು ಬಾಕಿ ಇದೆ. ಒಟ್ಟು ೧೦೦೦ ಕೋಟಿ ರೂ. ದಾಟಿದೆ.
೧೯೦ ಕೋಟಿ ರೂ. ಸಂಸ್ಥೆಗಿರುವ ಬಜೆಟ್ಪಾಲು. ಈಗ ಸಬ್ಸಿಡಿ ರಹಿತ ಸಾಮಗ್ರಿಗಳನ್ನು ಮಾರಾಟ ಮಾಡಿ ಸಪ್ಲೈಕೋ ಮುಂದುವರಿಯುತ್ತಿದೆ. ತಿಂಗಳಿಗೆ ೨೫ ಕೋಟಿ ರೂ.ವಾಗಿದೆ. ಸಬ್ಸಿಡಿ ರೂಪದಲ್ಲಿ ಸಂಸ್ಥೆಗೆ ವೆಚ್ಚ ಆಗುತ್ತಿದೆ. ಇದು ಹಲವು ತಿಂಗಳಿಂದ ಲಭಿಸದ ಕಾರಣ ಸಪ್ಲೈಕೋದ ತಾಳ ತಪ್ಪಿದೆ. ವೆಚ್ಚ ಕಡಿಮೆಗೊಳಿಸುವು ದರಂಗವಾಗಿ ಆದಾಯ ಕಡಿಮೆ ಇರುವ ಮಾವೇಲಿ ಸ್ಟೋರ್ಗಳನ್ನು ಮುಚ್ಚಲು ಚಿಂತಿಸಲಾಗುತ್ತಿದೆ.