ಅಕ್ಷಯ್ ಕಲ್ಲೇಗ ಕೊಲೆ : ಆರೋಪಿಗಳನ್ನು ಸ್ಥಳಕ್ಕೆ ತಲುಪಿಸಿ ತನಿಖೆ

ಪುತ್ತೂರು: ಕಲ್ಲೇಗ ಟೈಗರ್ಸ್ ಹುಲಿವೇಷ ತಂಡದ ಮುಖಂಡ ಅಕ್ಷಯ್ ಕಲ್ಲೇಗ (೨೪)ನನ್ನು ಕೊಲೆಗೈದ ಆರೋಪಿಗಳನ್ನು ಪೊಲೀಸರು ಘಟನಾ ಸ್ಥಳಕ್ಕೆ ತಂದು ತನಿಖೆ  ನಡೆಸಿದರು. ಮೂವರು ಆರೋಪಿ ಗಳನ್ನು ಬಿಗಿ ಭದ್ರತೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್‌ರ ನೇತೃತ್ವದಲ್ಲಿ ಸ್ಥಳಕ್ಕೆ ಕರೆತರಲಾಗಿದೆ. ಈ ವೇಳೆ ಸ್ಥಳದಲ್ಲಿ ನೂರಾರು ಮಂದಿ ಸೇರಿದ್ದು ಕೊನೆಗೆ ಪೊಲೀಸರು ಇವರನ್ನು ಚದುರಿಸಬೇ ಕಾಯಿತು.

ನಾಲ್ವರು ಆರೋಪಿಗಳಾಗಿರುವ ಮನೀಶ್, ಚೇತನ್, ಮಂಜುನಾಥ್, ಕೇಶವರನ್ನು ಪೊಲೀಸರು ಬಂಧಿಸಿ ದ್ದಾರೆ. ಆರೋಪಿಗಳು ಎರಡು ತಲವಾ ರು ಉಪಯೋಗಿಸಿ  ಕಡಿದಿದ್ದು, ಮೃತದೇಹದಲ್ಲಿ ೫೮ರಷ್ಟು ಗಾಯವನ್ನು ಪೋಸ್ಟ್ ಮಾರ್ಟಂ ವೇಳೆ ಪತ್ತೆಹಚ್ಚಲಾಗಿದೆ.

ವಾಹನ ಅಪಘಾತ ವಿಷಯದಲ್ಲಿ  ವಾಗ್ವಾದ ನಡೆದಿದ್ದು, ಈ ಬಗ್ಗೆ    ನಷ್ಟ ಪರಿಹಾರ ನೀಡಬೇಕೆಂಬ  ಅಕ್ಷಯ್‌ನ ಬೇಡಿಕೆ ಹಿನ್ನೆಲೆಯಲ್ಲಿ ಕೊಲೆ ನಡೆದಿರಬೇಕೆಂದು ಶಂಕಿಸಲಾಗುತ್ತಿದೆ. ನಷ್ಟ ಪರಿಹಾರದ ಕುರಿತು ಮಾತನಾಡಲು ತಂಡ ಅಕ್ಷಯ್‌ನನ್ನು ನೆಹರೂ ನಗರದ ಬಳಿ ಬರಲು ಹೇಳಿದ್ದು, ಈ ವೇಳೆ ಆಕ್ರಮ  ಅಕ್ಷಯ್ ಜೊತೆ ಗೆಳೆಯ ವಿಖ್ಯಾತ್ ಕೂಡಾ ಇದ್ದನೆನ್ನಲಾಗಿದ್ದು, ಈತನಿಗೂ ಗಾಯವಾಗಿದೆ ಎನ್ನಲಾಗಿದೆ. ವಿಖ್ಯಾತ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page