ಅಗರ್ತಿಮೂಲೆ ಶ್ರೀ ಅಯ್ಯಪ್ಪ ಭಜನಾಮಂದಿರದ ೭ನೇ ಪ್ರತಿಷ್ಠಾ ವರ್ಧಂತಿ ಉತ್ಸವ ಹಾಗೂ ವಾರ್ಷಿಕ ತಂಬಿಲ ೯ರಂದು
ಉಪ್ಪಳ: ಬೇಕೂರು ಅಗರ್ತಿ ಮೂಲೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ಏಳನೇ ಪ್ರತಿಷ್ಟಾ ವರ್ಧಂತಿ ಉತ್ಸವ ಹಾಗೂ ವಾರ್ಷಿಕ ತಂಬಿಲ ಈ ತಿಂಗಳ 9ರಂದು ವಿವಿಧ ಕಾರ್ಯಕ್ರಮಗ ಳೊಂದಿಗೆ ಜರಗಲಿದೆ. ಅಂದು ಬೆಳಿಗ್ಗೆ 5ಕ್ಕೆ ಗಣಹೋಮ, 7ರಿಂದ ಸಂಜೆ 6ರತನಕ ವಿವಿಧ ತಂಡಗಳಿAದ ಭಜನೆ, 7ಕ್ಕೆ ಶ್ರೀ ರಕ್ತೇಶ್ವರೀ ಗುಳಿಗ ಬನದಲ್ಲಿ ತಂಬಿಲ, ಎಂ.ಕೆ ಅಶೋಕ ಕುಮಾರ್ ಹೊಳ್ಳ ರವರಿಂದ ದೀಪ ಪ್ರಜ್ವಲನೆ, ಬೆಳಿಗ್ಗೆ 9ಕ್ಕೆ ಜಾಮ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6ಕ್ಕೆ ಮಂಗಳ ಪೂಜೆ, ಸಂಜೆ 7ರಿಂದ ವಿಠಲ ನಾಯಕ್ ಕಲ್ಲಡ್ಕ ಬಳಗದವ ರಿಂದ ಗೀತಾ ಸಾಹಿತ್ಯ ಸಂಭ್ರಮ. ಹಾಗೂ ಶಾಸ್ತಾ ಪ್ರೆಂಡ್ಸ್ ಇದರ 7ನೇ ವಾರ್ಷಿಕೋತ್ಸವದ ಅಂಗವಾಗಿ ನೃತ್ಯ, ಗಾನ, ಹಾಸ್ಯ, ವೈಭವ, ರಾತ್ರಿ 9ರಿಂದ ಅನ್ನಸಂತರ್ಪಣೆ ನಡೆಯಲಿದೆ.