ಅಡಿಕೆ ಖರೀದಿ, ಮಾರಾಟಕ್ಕೆ ಟೆಂಡರ್ ಅಕ್ಟೋಬರ್ ೨೧ರಂದು ನೀರ್ಚಾಲಿನಲ್ಲಿ ಆರಂಭ

ಬದಿಯಡ್ಕ: ನೀರ್ಚಾಲಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಕಾಸರಗೋಡು ಕೃಷಿಕರ ಸಹಕಾರಿ ಮಾರಾಟ ಸಂಘ ನೀರ್ಚಾಲು ಸಂಸ್ಥೆಯು ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು ಹಾಗೂ ಕೃಷಿಕ ಸದಸ್ಯರಿಗೆ ಅಗತ್ಯವಿರುವ ಎಲ್ಲಾ ಸೇವೆಗಳನ್ನು ಒದಗಿಸುವ ಧ್ಯೇಯದೊಂದಿಗೆ ಚಾಲಿ ಅಡಿಕೆಯ ಟೆಂಡರು ಖರೀದಿ ವ್ಯವಸ್ಥೆಯನ್ನು ಆರಂಭಿಸುತ್ತಿದೆ. ಈ ನೂತನ ವ್ಯವಸ್ಥೆಯು ಅಕ್ಟೋಬರ್ 21ರಂದು ಆರಂಭಗೊಳ್ಳಲಿದೆ. ಮುಂದೆ ಪ್ರತೀ ಗುರುವಾರದಂದು ಬೆಳಗ್ಗೆ 10 ಗಂಟೆಯಿAದ ಮಧ್ಯಾಹ್ನ 1 ಗಂಟೆಯ ತನಕ ಟೆಂಡರು ಪ್ರಕ್ರಿಯೆ ನಡೆಯಲಿದೆ. ಅಪರಾಹ್ನ 2 ಗಂಟೆಗೆ ಟೆಂಡರು ದರ ಪ್ರಕಟಗೊಳ್ಳಲಿದೆ. ಆ ದಿನದ ಅತ್ಯುನ್ನತ ದರ ನೀಡುವ ಖರೀದಿದಾರರಿಗೆ ತಮ್ಮ ಟೆಂಡರಿಗೆ ಇರಿಸಿದ ಅಡಿಕೆಯನ್ನು ವಿಕ್ರಯ ಮಾಡುವ ಅಥವಾ ರದ್ದುಗೊಳಿಸುವ ಅಧಿಕಾರಿವು ಸದಸ್ಯನಿಗಿದೆ. ಈ ನೂತನ ಪದ್ಧತಿಯು ಅಡಿಕೆ ಕೃಷಿಕರಿಗೆ ವರದಾನವಾಗಲಿದೆ.

Leave a Reply

Your email address will not be published. Required fields are marked *

You cannot copy content of this page