ಅಡುಗೆ ನಿರತ ವೇಳೆ ಬೆಂಕಿ ತಗಲಿ ಚಿಕಿತ್ಸೆಯಲ್ಲಿದ್ದ ಮಹಿಳೆ ಮೃತ್ಯು
ನೀರ್ಚಾಲು: ಅಡುಗೆ ಮಾಡುವಾಗ ಧರಿಸಿದ ಬಟ್ಟೆಗೆ ಬೆಂಕಿ ತಗಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಮಹಿಳೆ ಮೃತಪಟ್ಟರು. ನೀರ್ಚಾಲು ಪೂವಾಳೆ ನಿವಾಸಿ ಜಗನ್ನಿವಾಸ ಆಳ್ವರ ಪುತ್ರಿ ರೇಖಾ (45) ನಿನ್ನೆ ಮಂಗಳೂರು ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಕಳೆದ ಫೆಬ್ರವರಿ ೯ರಂದು ಮನೆಯಲ್ಲಿ ಅಡುಗೆ ಕೆಲಸದಲ್ಲಿ ನಿರತರಾಗಿದ್ದಾಗ ಬಟ್ಟೆಗೆ ಬೆಂಕಿ ತಗಲಿತ್ತು. ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ನಿನ್ನೆ ನಿಧನ ಸಂಭವಿಸಿದೆ. ಮೃತರು ತಂದೆ, ಸಹೋದರರಾದ ಶಿವಪ್ರಸಾದ್, ಹರಿಪ್ರಸಾದ್, ಗಣೇಶ್ ಪ್ರಸಾದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ತಾಯಿ ಕೃಷ್ಣವೇಣಿ, ಓರ್ವ ಸಹೋದರ ದುರ್ಗಾಪ್ರಸಾದ್ ಈ ಹಿಂದೆ ನಿಧನ ಹೊಂದಿದ್ದಾರೆ. ನಿನ್ನೆ ಮನೆ ಪರಿಸರದಲ್ಲಿ ಅಂತ್ಯ ಸಂಸ್ಕಾರ ನಡೆದಿದೆ.