ಅಡೂರು ನಿವಾಸಿ ಮಧುರೈಯಲ್ಲಿ ಹೃದಯಾಘಾತದಿಂದ ನಿಧನ
ಮುಳ್ಳೇರಿಯ: ಮೂಲತಃ ಅಡೂರು ನಾಗತ್ತಮೂಲೆ ನಿವಾಸಿ ತಮಿಳುನಾಡು ಮಧುರೈಯಲ್ಲಿ ಬೇಕರಿ ಕೆಲಸಗಾರನಾಗಿದ್ದ ಉದಯನ್ (40) ಹೃದಯಾಘಾತದಿಂದ ನಿಧನ ಹೊಂದಿದರು. ಇವರ ಪತ್ನಿ ಕಾರಡ್ಕ ನೆಚ್ಚಿಪಡ್ಪು ನಿವಾಸಿ ಜೋತ್ಸ್ನರಾಗಿದ್ದಾರೆ.
ಕಳೆದ ಮೂರು ದಿನದ ಹಿಂದೆ ಮಧುರೈಯಲ್ಲಿ ಹೃದಯಾಘಾತದಿಂದ ಬಿದ್ದಿದ್ದರೆಂದೂ ಶೀಘ್ರವೇ ಆಪರೇಶನ್ ನಡೆಸಬೇಕೆಂದು ಊರಿಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಸಂಬಂಧಿಕರು ಅಲ್ಲಿಗೆ ತೆರಳಲು ಸಿದ್ಧತೆಯಲ್ಲಿದ್ದರು. ನಿನ್ನೆ ರಾತ್ರಿ ಮೃತಪಟ್ಟ ಬಗ್ಗೆ ಊರಿಗೆ ಸುದ್ಧಿ ಲಭಿಸಿದೆ. ಬಿದ್ದಾಗ ತಲೆಗೆ ಉಂಟಾದ ಗಾಯದಿಂದ ನಿಧನ ಸಂಭವಿಸಿದೆ ಎಂದೂ ಹೇಳಲಾಗಿದೆ. ಸಂಬಂಧಿಕರು ಮಧುರೈಗೆ ತೆರಳಿದ್ದು, ಮೃತ ದೇಹವನ್ನು ಉದಯನ್ರ ಮನೆಗೆ ತರಲಾಗುವುದೆಂದು ಮನೆ ಮಂದಿ ತಿಳಿಸಿದ್ದಾರೆ.
ಮೃತ ಉದಯನ್ ತಂದೆ ಕೃಷ್ಣನ್, ತಾಯಿ ನಾರಾಯಣಿ, ಪತ್ನಿ, ಮಕ್ಕಳಾದ ವೈಗಾ, ವಾಮಿಕ, ಸಹೋದರರಾದ ಪವಿತ್ರನ್, ಪ್ರದೀಪ್ ಕುಮಾರ್, ಸಹೋದರಿ ವಿನೀತ್ ಕುಮಾರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.