ಅಣಂಗೂರಿನಲ್ಲಿ ಫಸ್ಟ್ ನ್ಯೂರೋ ಕಾಂಪ್ರಹೆನ್ಸಿವ್ ನ್ಯೂರೋಸೈನ್ಸ್ ಸೆಂಟರ್ ಉದ್ಘಾಟನೆ ನಾಳೆ

ವಿದ್ಯಾನಗರ: ಅಣಂಗೂರಿನಲ್ಲಿ ಫಸ್ಟ್ ನ್ಯೂರೋ ಕಾಂಪ್ರಹೆನ್ಸಿವ್ ನ್ಯೂರೋ ಸೈನ್ಸ್ ಸೆಂಟರ್ ನಾಳೆ ಉದ್ಘಾಟನೆಗೊಳ್ಳಲಿದೆ. ಸಂಜೆ ೫ ಗಂಟೆಗೆ ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸುವರು. ಉತ್ತರ ಕೇರಳದಲ್ಲಿ ಈ ರೀತಿಯ ಚಿಕಿತ್ಸಾ ಸೌಲಭ್ಯ ಮೊತ್ತಮೊದಲಾಗಿದೆಯೆಂದು ಪತ್ರಿಕಾಗೋಷ್ಠಿಯಲ್ಲಿ ನ್ಯೂರಾಲಜಿಸ್ಟ್ ಡಾ| ಮೊಹಮ್ಮದ್ ಶಮೀಮ್ ಕಟ್ಟತ್ತಡ್ಕ ತಿಳಿಸಿದ್ದಾರೆ. ರಂಜಿತ್ ಶೆಟ್ಟಿ,ಸಂಪತ್ತ್ ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಇತರ ಶಾಸಕರು, ನಗರಸಭಾ ಉಪಾಧ್ಯಕ್ಷೆ, ಜಿ.ಪಂ. ಅಧ್ಯಕ್ಷೆ, ಜಿಲ್ಲಾಧಿಕಾರಿ ಸಹಿತ ಹಲವು ಜನಪ್ರತಿನಿಧಿಗಳು ಭಾಗವಹಿಸುವರು. ಆಸ್ಪತ್ರೆಯಲ್ಲಿ ಡಾ| ಮೊಹಮ್ಮದ್ ಶಮೀಮ್ ಕಟ್ಟತ್ತಡ್ಕ, ಡಾ| ಶೃತಿ ಎನ್.ಎಂ, ಡಾ| ರಂಜನ್ ಎಸ್.ಎಸ್ ರೋಗಿಗಳನ್ನು ತಪಾಸಣೆ ನಡೆಸಿ ಚಿಕಿತ್ಸೆ ನಿರ್ದೇಶಿಸುವರೆಂದು ಸಂಬಂ ಧಪಟ್ಟವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page