ಅಣಂಗೂರು ಶ್ರೀರಾಮ್ ಎಂಟರ್‌ಪ್ರೈಸಸ್ ಮಾಲಕ ನಿಧನ

ಕಾಸರಗೋಡು: ಅಣಂಗೂರು ಶ್ರೀರಾಮ್ ಎಂಟರ್‌ಪ್ರೈಸಸ್ ಮಾಲಕ ರಾಮ ಪ್ರಸಾದ್ (52) ಹೃದಯಾಘಾತದಿಂದ ನಿಧನ ಹೊಂದಿದರು. ನಿನ್ನೆ ಬೆಳಿಗ್ಗೆ ಎದೆನೋವು ಕಂಡುಬಂದ ಹಿನ್ನೆಲೆಯಲ್ಲಿ ಸ್ವಂತವಾಗಿ ಕಾರು ಚಲಾಯಿಸಿಕೊಂಡು ಖಾಸಗಿ ಆಸ್ಪತ್ರೆಗೆ  ತಲುಪಿದ್ದರು. ಆದರೆ ಮಧ್ಯಾಹ್ನ ವೇಳೆ ನಿಧನಹೊಂದಿದರು.  ಈ ಮೊದಲು ನುಳ್ಳಿಪ್ಪಾಡಿಯಲ್ಲಿ ಅಂಗಡಿ ನಡೆಸುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಂಗವಾಗಿ ಅಂಗಡಿಯನ್ನು ಅಣಂಗೂರಿಗೆ ಸ್ಥಳಾಂತರಿಸಿದ್ದರು. ಅಡ್ಕತ್ತಬೈಲು ಗುಡ್ಡೆ ದೇವಸ್ಥಾನ ಬಳಿಯ ನಿವಾಸಿಯಾಗಿದ್ದಾರೆ. ತಂದೆ ಪ್ರಕಾಶ್ ಆಟೋಮೊಬೈಲ್ ಮಾಲಕರಾಗಿದ್ದ ಸುಬ್ರಾಯ ಭಟ್ ಈ ಹಿಂದೆ ನಿಧನಹೊಂದಿದ್ದಾರೆ.

ಮೃತರು ಪತ್ನಿ ಗೌರಿ, ಮಕ್ಕಳಾದ  ಅನ್ವಿದ್, ಅಶ್ವತ್ಥ್, ಮೂರು ಮಂದಿ ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page