ಅಣ್ಣನ ಇರಿತದಿಂದ ತಮ್ಮನಿಗೆ ಗಂಭೀರ ಗಾಯ
ಕಾಸರಗೋಡು: ಯೋಧನಾದ ಅಣ್ಣನೋರ್ವ ಸಹೋದರನಿಗೆ ಇರಿದು ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ.
ಚೀಮೇನಿ ತಿಮಿರಿ ತಾಳೆಚೆಂ ಬ್ರಕ್ಕಾನ ಕುನ್ನು ಕಿಣಟ್ಟುಕಾರದ ವರುಣ್ದಾಸ್ (26) ಎಂಬವರು ಇರಿತದಿಂದ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅಕ್ರಮಣ ತಡೆಯಲೆತ್ನಿಸಿದ ತಂದೆ ವಿಪ್ರದಾಸ್ (62) ಕೂಡಾ ಗಾಯಗೊಂಡಿದ್ದಾರೆ.
ನಿನ್ನೆರಾತ್ರಿ ೮.೪೫ರ ವೇಳ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ವರುಣ್ದಾಸ್ನ ಸಹೋದರನೂ ಕಲ್ಲಿಕೋಟೆ ಟೆರಿಟೋರಿಯಾಲ್ ಆರ್ಮಿಯಲ್ಲಿ ನೌಕರನಾಗಿರುವ ವಿಪಿನ್ದಾಸ್ನನ್ನು ಚೀಮೇನಿ ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ.