ಅಧ್ಯಾಪಕನ ಚಿಕಿತ್ಸೆಗೆ ಸಂಗಮ್ ಬಸ್‌ನಿಂದ ಸ್ಪಂದನೆ: ಕಾರುಣ್ಯ ಯಾತ್ರೆ ಪಳ್ಳಂನಿಂದ ಆರಂಭ
ನೀರ್ಚಾಲು: ಮುಂಡಿತ್ತಡ್ಕ ಶಾಲೆಯ ಹಿಂದಿ ಅಧ್ಯಾಪಕ ಪ್ರಶಾಂತ್ ರೈ ಪಿಲಾಂಕಟ್ಟೆಯವರ ಚಿಕಿತ್ಸೆಗೆ ಧನಸಹಾಯಾರ್ಥವಾಗಿ ಮುಂಡಿತ್ತಡ್ಕದ ಸಂಗಮ್ ಬಸ್ ಕಾರುಣ್ಯ ಯಾತ್ರೆ ನಡೆಸಿ ಸ್ಪಂದಿಸಿದೆ. ಇಂದು ಬೆಳಿಗ್ಗೆ ಮುಂಡಿತ್ತಡ್ಕ ಪಳ್ಳಂನಿಂದ ಹೊರಟ ಬಸ್‌ನ ಕಾರುಣ್ಯ ಸಂಚಾರಕ್ಕೆ ಎಣ್ಮಕಜೆ ಪಂ. ಅಧ್ಯಕ್ಷ ಸೋಮಶೇಖರ ಜೆ.ಎಸ್. ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಬದಿಯಡ್ಕ ಪಂ. ಉಪಾಧ್ಯಕ್ಷ ಎಂ. ಅಬ್ಬಾಸ್, ಪುತ್ತಿಗೆ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಎಂ.ಎಚ್, ಬದಿಯಡ್ಕ ಪಂ. ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ಎಣ್ಮಕಜೆ ಪಂ. ಮಾಜಿ ಉಪಾಧ್ಯಕ್ಷೆ ಆಯಿಷಾ ಎ.ಎ, ಸದಸ್ಯೆ ಸರೀನಾ ಮುಸ್ತಫ, ಪುತ್ತಿಗೆ ಪಂ. ಮಾಜಿ ಸದಸ್ಯ ಎಸ್. ನಾರಾಯಣ, ಪಳ್ಳಂ ಜಮಾಯತ್ ಮಾಜಿ ಖತೀಬ್ ಮುಹಮ್ಮದ್ ಕುಂಞಿ ಮುಸ್ಲಿಯಾರ್, ಅಬ್ಬಾಸ್ ಸಖಾಫಿ ಬಾಪಲಿಪೊನ, ಅರಿಯಪ್ಪಾಡಿ ದೈವಸ್ಥಾನದ ಅಧ್ಯಕ್ಷ ಸೀತಾರಾಮ ವಳಮುಗೇರು, ಭಜನಾ ಮಂದಿರದ ಪದಾಧಿಕಾರಿಗಳಾದ ರಾಮ್ ಕುಮಾರ್, ಶಾಂತ ಕುಮಾರ್, ಸಾಮಾಜಿಕ ಮುಂದಾಳುಗಳಾದ ಸಿದ್ದಿಕ್, ಸಂತೋಷ್ ಕುಮಾರ್, ಖಮರುದ್ದೀನ್, ಸತ್ತಾರ್, ಬಸ್ ಮಾಲಕ ಅಝೀಜ್ ವಳಮುಗೇರ್ ಭಾಗವಹಿಸಿದ್ದರು. ಬಸ್ ಕಾಸರಗೋಡು, ವಿದ್ಯಾನಗರ, ಉಳಿಯತ್ತಡ್ಕ, ಮಧೂರು, ನೀರ್ಚಾಲು, ಬದಿಯಡ್ಕ, ಪೆರ್ಲ ದಾರಿಯಾಗಿ ಸಂಚರಿಸುತ್ತಿದೆ.