ಅನಂತಪುರ ಉಳಿಸಿ ಅಭಿಯಾನಕ್ಕೆ ವ್ಯಾಪಕ ಬೆಂಬಲ

ಕುಂಬಳೆ: ಅನಂತಪುರದಲ್ಲಿ ದುರ್ಗಂಧದಿಂದ ಸ್ಥಳೀಯರಿಗೆ ಸಮಸ್ಯೆ ಉಂಟಾಗುತ್ತಿರುವುದನ್ನು ಪ್ರತಿಭಟಿಸಿ ಕೋಳಿ ತ್ಯಾಜ್ಯ ಸಂಸ್ಕರಣೆ ಘಟಕದ ವಿರುದ್ಧ ಕಳೆದ ಗಾಂಧಿ ಜಯಂತಿ ದಿನದಿಂದ ನಡೆಸುತ್ತಿರುವ ಅನಿರ್ದಿಷ್ಟ ಸತ್ಯಾಗ್ರಹ ಚಪ್ಪರಕ್ಕೆ ಎಂಡೋಸ ಲ್ಫಾನ್ ವಿರುದ್ಧ ಹೋರಾಟದ ಮುಂ ಚೂಣಿ ನಾಯಕ ಡಾ| ಮೋಹನ್ ಕುಮಾರ್ ಪಡ್ರೆ ಭೇಟಿ ನೀಡಿ ಸತ್ಯಾಗ್ರಹಿಗಳಿಗೆ ಬೆಂಬಲ ನೀಡಿದರು.

ಸೇವ್ ಅನಂತಪುರ ವತಿಯಿಂದ ನಡೆಯುತ್ತಿರುವ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಹವ್ಯಕ ಪರಿಷತ್ ಕುಂಬಳೆ ವಲಯದ ಅಧ್ಯಕ್ಷರು, ಕಾರ್ಯದರ್ಶಿ  ಹಾಗೂ ಪದಾಧಿಕಾರಿಗಳು ಭೇಟಿ ನೀಡಿ ಬೆಂಬಲ ಸೂಚಿಸಿದರು.

RELATED NEWS

You cannot copy contents of this page