ಅನಗತ್ಯ ಹಂಪ್: ಸೀತಾಂಗೋಳಿ-ವಿದ್ಯಾನಗರ ರಸ್ತೆಯಲ್ಲಿ ಸಂಚಾರ ಕಿರಿಕಿರಿ
ವಿದ್ಯಾನಗರ: ವಿದ್ಯಾನಗರದಿಂದ ಸೀತಾಂಗೋಳಿ ವರೆಗೆ ಸಾಗುವ ರಸ್ತೆಯಲ್ಲಿ ಹಂಪ್ಗಳದ್ದೇ ಕಾರುಬಾರು ಎಂದು ಚಾಲಕರು ದೂರಿದ್ದಾರೆ. ಅನಗತ್ಯ ಹಂಪ್ಗಳಿಂದಾಗಿ ಸಂಚಾರಕ್ಕೆ ಕಿರಿಕಿರಿಯಾಗುತ್ತಿದೆ ಎಂದು ಚಾಲಕರು ತಿಳಿಸುತ್ತಾರೆ. ಈ ರಸ್ತೆಯಲ್ಲಿ ಒಟ್ಟು 12 ಹಂಪ್ಗಳಿದ್ದು, ಇದರಲ್ಲಿ ರೋಯಲ್ ಕನ್ವೆನ್ಷನ್ ಹಾಲ್, ಎರಡನೇ ಮೈತ್ರಿ ಕಾಲನಿ ಕಳೆದು ಇಝ್ಝತ್ನಗರಕ್ಕೆ ತಲುಪುವಲ್ಲಿ ಹಂಪ್ಗಳ ಅಗತ್ಯವೇ ಇಲ್ಲವೆಂದು ಚಾಲಕರು ತಿಳಿಸುತ್ತಾರೆ. ಇಲ್ಲಿರುವ ಹಂಪ್ಗಳಿಂದಾಗಿ ವಾಹನಗಳ ವೇಗ ಕಡಿತಗೊಳಿಸುವಾಗ ಹಿಂದಿನಿಂದ ಬರುವ ವಾಹನಗಳ ಚಾಲಕರಿಗೆ ಪಕ್ಕನೆ ಅರಿವಾಗದೆ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ ಎಂದು ವಾಹನ ಚಾಲಕರು ದೂರುತ್ತಾರೆ. ಅಗತ್ಯವಿಲ್ಲದ ಹಂಪ್ಗಳನ್ನು ಕಡಿತಗೊಳಿಸಿ ರಸ್ತೆಯಲ್ಲಿ ಸುಗಮ ಸಂಚಾರವಾಗುವ ವ್ಯವಸ್ಥೆ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.