ಅನಧಿಕೃತ ಕಗ್ಗಲ್ಲಿನ ಕೋರೆಯಲ್ಲಿ ಸಂಗ್ರಹಿಸಿಡಲಾದ ಸ್ಫೋಟಕ ವಸ್ತುಗಳು ಪತ್ತೆ; ಇಬ್ಬರ ಸೆರೆ

ಕೋರೆಯಲ್ಲಿ ಸಂಗ್ರಹಿಡಲಾದ ಸ್ಪೋಟಕ ವಸ್ತುಗಳನ್ನು ಮಂಜೇಶ್ವರ ಪೊಲೀಸರು ವಶಪಡಿಸಿ ಇಬ್ಬರನ್ನು ಬಂಧಿಸಿದ್ದಾರೆ. ಪೈವಳಿಕೆ ಪಂ.ನ ದೈಯಿಗೋಳಿ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಕಗ್ಗಲ್ಲಿನ ಕೋರೆಗೆ ಶನಿವಾರ ಸಂಜೆ ಮಂಜೇಶ್ವರ ಇನ್‌ಸ್ಪೆಕ್ಟರ್ ರಾಜೀವ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಕೋರೆಯಲ್ಲಿ ಸಂಗ್ರಹಿಸಿಡಲಾದ 33 ಜಿಲಾಸ್ಟಿನ್‌ಸ್ಟಿಕ್, 25 ಇಲೆಕ್ಟಿçಕಲ್ ಡಿಟಾನೇಟರ್, ಸ್ವಿಚ್ ಬೋಡ್, ಕಂಪ್ರಸರ್‌ನ್ನು ಪೊಲೀಸರು ವಶಪಡಿಸಿದ್ದಾರೆ. ಈ ಸಂಬAಧ ಕೋರೆಯ ಕಾರ್ಮಿಕರಾದ ಜಾರ್ಖಂಡ್ ಬೆಲ್ಪಹಾದಿ ನಿವಾಸಿ ಸುಜಿತ್ ತಿಗ್ಗ [30], ಮಲಪುರಂ ಚೆಲೇಪ್ರ ಚಳಿಪ್ಪಾಡಂ ಪಳ್ಳಿಪರಂಬ್ ದಾರೂಲ್ ನಿಜಾತ್ ಹೌಸ್‌ನ ಅಬ್ದುಲ್ ಖಾದರ್ [29] ಎಂಬಿವರÀನ್ನು ಪೊಲೀಸರು ಸೆರೆಹಿಡಿದಿ ದ್ದಾರೆ. ಕೇಸು ದಾಖಲಿಸಿದ ಪೋಲೀ ಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page