ಅನಧಿಕೃತ ಮೀನುಗಾರಿಕೆ: ರಾಜ್ಯದಲ್ಲಿಯೇ ಅತೀ ಹೆಚ್ಚು ಜುಲ್ಮಾನೆ ವಸೂಲಿ ಕಾಸರಗೋಡಿನಲ್ಲಿ

ಕಾಸರಗೋಡು: ಕಾನೂನು ವಿರುದ್ಧವಾಗಿ ಯಾಂತ್ರೀಕೃತ ಬೋಟ್‌ಗಳನ್ನು ಬಳಸಿ ಸಮುದ್ರದಲ್ಲಿ  ಅನಧಿಕೃತವಾಗಿ ಮೀನುಗಾರಿಕೆ ನಡೆಸುವುದನ್ನು ತಡೆಗಟ್ಟುವಲ್ಲಿ ಹಾಗೂ  ಅದರ ಹೆಸರಲ್ಲಿ  ರಾಜ್ಯದಲ್ಲಿ ಹೆಚ್ಚು ಜುಲ್ಮಾನೆ ವಸೂಲಿ ಮಾಡಿದ್ದು    ಕಾಸರಗೋಡಿನಲ್ಲಾಗಿದೆ.

ರಾಜ್ಯ ಮೀನುಗಾರಿಕಾ ಇಲಾಖೆಯ ವರದಿಯಲ್ಲಿ ಈ ವಿಷಯ ತಿಳಿಸಲಾಗಿದೆ.

೨೦೨೩-೨೪ನೇ ಆರ್ಥಿಕ ವರ್ಷದಲ್ಲಿ ಕಾಸರಗೋಡು  ಜಿಲ್ಲೆಯ ಸಮುದ್ರ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಅನಧಿಕೃತವಾಗಿ ಮೀನುಗಾರಿಕೆ ನಡೆಸಿದ ಹಲವು ಯಾಂತ್ರೀಕೃತ ಬೋಟ್‌ಗಳನ್ನು ಕಾಸರಗೋಡು ಮೀನುಗಾರಿಕಾ ಇಲಾಖೆ ವಶಪಡಿಸಿಕೊಂಡಿದ್ದು, ಅದಕ್ಕೆ ಸಂಬಂಧಿಸಿ ೬೮ ಲಕ್ಷ ರೂ. ಜುಲ್ಮಾನೆ ವಸೂಲಿ ಮಾಡಿದೆ. ಇದು ಇಡೀ ರಾಜ್ಯದಲ್ಲೇ ವಸೂಲಿ ಮಾಡಲಾದ ಅತೀ ಹೆಚ್ಚು ಜುಲ್ಮಾನೆ ಮೊತ್ತವಾಗಿದೆ.  ಇದೇ ರೀತಿ ೪೦ ಲಕ್ಷ ರೂ. ಜುಲ್ಮಾನೆ ವಸೂಲಿ ಮಾಡಿದ ಎರ್ನಾಕುಳಂ ದ್ವಿತೀಯ ಮತ್ತು ೩೬ ಲಕ್ಷ ರೂ. ಜುಲ್ಮಾನೆ ವಸೂಲಿ ಮಾಡಿದ ತೃಶೂರು ತೃತೀಯ ಸ್ಥಾನದಲ್ಲಿದೆ.

ರಾತ್ರಿ ವೇಳೆಗಳಲ್ಲಿ ಟ್ರೋಲಿಂಗ್, ಲೈಟ್ ಫಿಶ್ಶಿಂಗ್, ಪಲ್ಸ್ ಸೀನ್ ಬಲೆ ಉಪಯೋಗಿಸುವಿಕೆ, ಲೈಸನ್ಸ್ ಯಾ ಪರ್ಮಿಟ್ ಹೊಂದರೆ ಮೀನುಗಾರಿಕೆ ನಡೆಸುವಿಕೆ, ಶೋರ್ ಟ್ರೋಲಿಂಗ್, ಕಿರುಮೀನುಗಳನ್ನು ಹಿಡಿಯುವಿಕೆ, ಎರಡು ಬೋಟ್‌ಗಳನ್ನು ಪರಸ್ಪರ ಜೋಡಿಸಿ ನಡೆಸಲಾಗುತ್ತಿರವ ಮೀನುಗಾರಿಕೆ (ಫಯರ್ ಟ್ರೋಲಿಂಗ್) ಇತ್ಯಾದಿ ಅಪರಾಧ ಕೃತ್ಯಗಳಿಗಾಗಿ ಈ ಜುಲ್ಮಾನೆ ವಸೂಲಿ ಮಾಡಲಾಗುತ್ತಿದೆ. 

ಸಾಧಾರಣ  ಮಟ್ಟದ ಉಲ್ಲಂಘನೆಗೆ ೫೦೦೦ ರೂ.ನಿಂದ ೨.೫ ಲಕ್ಷ ರೂ. ಜುಲ್ಮಾನೆ ವಸೂಲಿ ಮಾಡಲಾಗುತ್ತಿದೆ. ೨೮೦ಕ್ಕಿಂತ ಮೇಲಿನ ಎಚ್.ಪಿ ಇಂಜಿನ್ ಬಳಸುವ ದೂರ ಬೋಟ್‌ಗಳಲ್ಲಿ ಮೀನುಗಾರಿಕೆ  ನಡೆಸಿದಲ್ಲಿ ೨.೫ ಲಕ್ಷ ರೂ. ಜುಲ್ಮಾನೆ ವಸೂಲಿ ಮಾಡಲಾಗುತ್ತಿದೆ.

ಈ ಕಾರ್ಯಾಚರಣೆಗಾಗಿ ಕಾಸರಗೋಡು ಮೀನುಗಾರಿಕಾ ಇಲಾಖೆ, ಕರಾವಳಿ ಪೊಲೀಸರು, ಮರೈನ್ ಎನ್‌ಪೋರ್ಸ್‌ಮೆಂಟ್ ಇಲಾಖೆ ಸಂಯುಕ್ತವಾಗಿ ಇಂತಹ ಕಾರ್ಯಾಚರಣೆ  ನಡೆಸುತ್ತಿದೆ. ರಾತ್ರಿ ವೇಳೆ ನಡೆಸುವ ಮೀನುಗಾರಿಕೆಗೆ ಅತೀ ಹೆಚ್ಚು ಜುಲ್ಮಾನೆ ವಸೂಲಿ ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page