ಅನಧಿಕೃತ  1 ಲೋಡ್ ಹೊಯ್ಗೆ ವಶ

ಉಪ್ಪಳ: ಅನಧಿಕೃತವಾಗಿ ಸಾಗಿಸುತ್ತಿದ್ದ ಒಂದು ಲೋಡ್ ಹೊಯ್ಗೆಯನ್ನು ಮಂಜೇಶ್ವರ ಎಸ್‌ಐ ಲಿನೇಶ್ ನೇತೃತ್ವದ ಪೊಲೀಸರು ವಶಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಲಾರಿಯ ಚಾಲಕ ಕರ್ನಾಟಕದ ಸೋಮೇಶ್ವರ ನಿವಾಸಿ ಆಶಿಫ್ (೩೪) ಎಂಬಾತನನ್ನು ಸೆರೆಹಿಡಿಯಲಾಗಿದೆ. ನಿನ್ನೆ ರಾತ್ರಿ 9 ಗಂಟೆಗೆ ಉಪ್ಪಳ ಭಾಗದಿಂದ ತಲಪ್ಪಾಡಿ ಭಾಗಕ್ಕೆ ಕೇರಳ ನೋಂದಾವಣೆಯ ಲಾರಿಯಲ್ಲಿ ಹೊಯ್ಗೆ ಸಾಗಿಸಲಾಗುತ್ತಿತ್ತೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page