ಅನಿವಾಸಿ ಉದ್ಯಮಿಯ ನಿಗೂಢ ಸಾವು : ನಿರ್ಣಾಯಕ ಹಂತಕ್ಕೆ ತಲುಪಿದ ತನಿಖೆ
ಕಾಸರಗೋಡು: ಪಳ್ಳಿಕೆರೆ ಪೂಚ ಕ್ಕಾಡ್ನಲ್ಲಿ ಅನಿವಾಸಿಯ ನಿಗೂಢ ಸಾವಿಗೆ ಸಂಬಂಧಿಸಿದ ಪ್ರಕರಣದ ತನಿಖೆ ನಿರ್ಣಾಯಕ ಹಂತಕ್ಕೆ ತಲು ಪಿದೆ. ತನಿಖೆ ಪೂರ್ಣಗೊಳ್ಳುವುದ ರೊಂದಿಗೆ ಮನೆಯಿಂದ ಕಳವಿಗೀ ಡಾದ ಸುಮಾರು ನಾಲ್ಕು ಕಿಲೋ ಚಿನ್ನಾಭರಣಗಳು ಏನಾದವು ಎಂಬ ಬಗ್ಗೆ ಉತ್ತರ ಲಭಿಸಬಹುದೆಂಬ ನಿರೀಕ್ಷೆಯನ್ನು ತನಿಖಾ ತಂಡ ವ್ಯಕ್ತಪಡಿಸಿದೆ.
ಅನಿವಾಸಿ ಉದ್ಯಮಿಯಾಗಿದ್ದ ಪೂಚಕ್ಕಾಡ್ನ ಎಂ.ಸಿ. ಅಬ್ದುಲ್ ಗಫೂರ್ (55) 2023 ಎಪ್ರಿಲ್ 14ರಂದು ಮುಂಜಾನೆ ಮನೆಯ ಬೆಡ್ರೂಂನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಂದು ಮನೆಯಲ್ಲಿ ಅವರು ಮಾತ್ರವೇ ಇದ್ದರೆನ್ನಲಾಗಿದೆ. ಸಹಜ ಸಾವೆಂಬ ನೆಲೆಯಲ್ಲಿ ಮೃತದೇದ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಅನಂತರ ಸಾವಿನಲ್ಲಿ ಸಂಶಯ ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಮೊದಲು ಲೋಕಲ್ ಪೊಲೀಸರು ಪ್ರಕರಣದ ತನಿಖೆ ನಡೆಸಿದರು. ಆದರೆ ಕ್ರಿಯಾ ಸಮಿತಿಯ ಒತ್ತಡದಿಂದ ಜಿಲ್ಲಾ ಕ್ರೈಂ ಬ್ರಾಂಚ್ಗೆ ತನಿಖೆ ಹಸ್ತಾಂತರಿಸ ಲಾಗಿತ್ತು. ಆದರೆ ಕ್ರೈಂ ಬ್ರಾಂಚ್ ತನಿಖೆ ಯಲ್ಲಿ ಹೆಚ್ಚಿನ ಪುರೋಗತಿ ಉಂಟಾ ಗಿಲ್ಲ. ಇದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾರ ನಿರ್ದೇಶ ಪ್ರಕಾರ ಡಿಸಿಆರ್ಬಿ ಡಿವೈಎಸ್ಪಿ ಜೋನ್ಸನ್ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ತಂಡ ರೂಪೀಕರಿಸಲಾ ಯಿತು. ತನಿಖೆಯಂಗವಾಗಿ ೪೦ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ಗೊಳಪ ಡಿಸಲಾಗಿದೆ. ಇದರಿಂದ ಅಬ್ದುಲ್ ಗಫೂರ್ರ ಸಾವಿಗೆ ಸಂ ಬಂ ಧಿಸಿ ನಿರ್ಣಾಯಕ ಮಾಹಿತಿ ಲಭಿಸಿದೆ ಯೆನ್ನಲಾಗುತ್ತಿದೆ. ಇದರ ಮುಂದುವರಿ ಕೆಯಾಗಿ ಮುಂದಿನ ದಿನಗಳಲ್ಲಿ ಕೆಲವು ಮಂದಿಯನ್ನು ತನಿಖೆಗೊಳಪಡಿಸಲಿದ್ದು, ಈ ವೇಳೆ ಪೂರ್ಣ ಮಾಹಿತಿ ಲಭಿಸಬಹುದೆಂಬ ನಿರೀಕ್ಷೆಯನ್ನು ತನಿಖಾ ತಂಡ ವ್ಯಕ್ತಪಡಿಸಿದೆ.