ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ರಿಕ್ಷಾ ಚಾಲಕ ಸಾವು
ಕಾಸರಗೋಡು: ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಆಟೋರಿಕ್ಷಾ ಚಾಲಕ ಸಾವನ್ನಪ್ಪಿದ್ದಾರೆ. ಕುಟ್ಟಿಕ್ಕೋಲ್ ಚೋನೋಕಿ ನಿವಾಸಿ ಪ್ರಕಾಶನ್ (48) ಸಾವನ್ನಪ್ಪಿದ ದುರ್ದೈವಿ.
ಬಂದಡ್ಕಕ್ಕೆ ಸಮೀಪದ ಮಾಣಿಮೂಲೆ ಪುಳಂಜಾಲ್‌ನಲ್ಲಿ ನಾಲ್ಕು ದಿನಗಳ ಹಿಂದೆ ಪ್ರಕಾಶನ್ ಚಲಾಯಿಸುತ್ತಿದ್ದ ಆಟೋರಿಕ್ಷಾ ನಿಯಂತ್ರಣ ತಪ್ಪಿ ಅಲ್ಲಿನ ಸೇತುವೆಯಿಂದ ಹೊಳೆಗೆ ಬಿದ್ದಿತ್ತು. ಅದರಿಂದ ಗಂಭೀರ ಗಾಯಗೊಂಡ ಪ್ರಕಾಶ್‌ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಗಿತ್ತು. ತಪಾಸಣೆಯಲ್ಲಿ ಶ್ವಾಸಕೋಶದೊಳಗೆ ನೀರು ಪ್ರವೇಶಿಸಿರುವುದಾಗಿ ತಿಳಿದು ಬಂದಿತ್ತು. ಚಿಕಿತ್ಸೆ ಮಧ್ಯೆ ಅವರು ನಿನ್ನೆ ಅಸುನೀಗಿದ್ದಾರೆ. ಕೃಷ್ಣನ್-ಕಮಲಾಕ್ಷಿ ದಂಪತಿ ಪುತ್ರನಾಗಿರುವ ಮೃತರು ಪತ್ನಿ ಸ್ಮಿತ, ಮಕ್ಕಳಾದ ಕೃತಿಕ, ಪ್ರಣವ್, ಸಹೋದರ ಸಹೋದರಿಯರಾದ ಉಣ್ಣಿ, ಪ್ರೇಮ, ಪ್ರಭಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಬೇಡಗ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.