ಅಪಘಾತದಲ್ಲಿ ಮೃತಪಟ್ಟ ನಟಿ ಪವಿತ್ರಳ ಗೆಳೆಯ ಆತ್ಮಹತ್ಯೆ
ಮಂಗಳೂರು: ನಟಿ ಪವಿತ್ರ ಜಯರಾಮ್ ಕಾರು ಅಪಘಾತದಲ್ಲಿ ಮೃತಪಟ್ಟ ಐದು ದಿನಗಳ ಬಳಿಕ ಅದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆಕೆಯ ಗೆಳೆಯ ನಟ ಚಂದು ಆತ್ಮಹತ್ಯೆಗೈ ದಿದ್ದಾರೆ. ಈ ಘಟನೆ ತೆಲುಗು ಕಿರುತೆರೆಗೆ ಶಾಕ್ ನೀಡಿದೆ. ಕಾರ್ತಿಕದೀಪಂ, ರಾದಮ್ಮಪೆಲ್ಲಿ ಮೊದಲಾದ ಧಾರಾವಾಹಿ ಗಳಲ್ಲಿ ಚಂದು ನಟಿಸಿದ್ದರು. ನರಸಿಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ಕಾಪುರ ಕಾಲನಿಯಲ್ಲಿರುವ ನಿವಾಸದಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪವಿತ್ರ ಸಾವಿನ ನಂತರ ಯುಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಚಂದು ಮೆದುಳಿನ ಖಾಯಿಲೆ ಇದೆ ಎಂದು ತಿಳಿಸಿದ್ದು, ಯಾವುದೇ ಕ್ಷಣ ಸಾವಿಗೀ ಡಾಗಬಹುದೆಂದು ಪ್ರತಿಕ್ರಿಯಿ ಸಿದ್ದರು. ಪತ್ನಿ ಶಿಲ್ಪ ಹಾಗೂ ಇಬ್ಬರು ಮಕ್ಕಳು ಇವರಿಗಿದ್ದಾರೆ. ಮೇ ೧೨ರಂದು ಪವಿತ್ರ ಸಂಚರಿಸುತ್ತಿದ್ದ ಕಾರು ಆಂಧ್ರಪ್ರದೇಶದ ಮೆಹಬೂಬ್ ನಗರ ಶೇರಿಪ್ಪಲ್ಲಿ ಬಳಿ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿ ನಟಿ ಮೃತಪಟ್ಟಿ ದ್ದರು. ಇದೇ ಕಾರಿನಲ್ಲಿದ್ದ ಚಂದು ಸಹಿತ ಮೂವರು ಗಾಯಗೊಂಡಿದ್ದರು.