ಅಪರಿಚಿತ ವ್ಯಕ್ತಿಯ ಜೀರ್ಣಿಸಿದ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
ಮಂಜೇಶ್ವರ: ಕಣ್ವತೀರ್ಥ ಸಮೀಪ ಅಪರಿಚಿತ ವ್ಯಕ್ತಿಯೊಬ್ಬನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತದೇಹ ಪೂರ್ಣ ಜೀರ್ಣಗೊಂಡ ಸ್ಥಿತಿಯಲ್ಲಿದ್ದು, ಒಂದುವಾರ ಹಿಂದೆ ಮೃತಪಟ್ಟಿರಬ ಹುದೆಂದು ಅಂದಾಜಿಸಲಾಗಿದೆ. ಕಣ್ವತೀರ್ಥ ಹೊಳೆ ಸಮೀಪದ ಕಾಡು ತುಂಬಿದ ಹಿತ್ತಿಲಲ್ಲಿ ಅಕೇಶಿಯಾ ಮರಕ್ಕೆ ಲುಂಗಿಯಿಂದ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಮೃತವ್ಯಕ್ತಿ ಪುರುಷನಾಗಿದ್ದು, ೪೦-೫೦ ವರ್ಷ ಮಧ್ಯೆ ಪ್ರಾಯ ಅಂದಾಜಿಸಲಾಗಿದೆ.
ಸಮೀಪದಲ್ಲೇ ಒಂದು ಬ್ಯಾಗ್ ಪತ್ತೆಯಾಗಿದ್ದು, ಅದರಲ್ಲಿ ಒಂದು ಲುಂಗಿ ಇತ್ತೆನ್ನಲಾಗಿದೆ. ಸ್ಥಳದ ಮಾಲಕ ವಾಮನ ಎಂಬವರು ನಿನ್ನೆ ಹಿತ್ತಿಲಿಗೆ ತೆರಳಿದಾಗ ಮೃತದೇಹ ಕಂಡುಬಂದಿದೆ. ಅವರು ನೀಡಿದ ದೂರಿನಂತೆ ಮಂಜೇಶ್ವರ ಸಿಐ ರಜೀಶ್, ಎಸ್‌ಐ ಪ್ರಶಾಂತ್ ನೇತೃತ್ವದ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದಾರೆ. ಮೃತ ವ್ಯಕ್ತಿ ಯಾರೆಂದು ಗುರುತುಹಚ್ಚಲಾಗಿಲ್ಲ. ಕರ್ನಾಟಕ ನಿವಾಸಿಯಾಗಿರಬಹುದೆಂದು ಸಂಶಯಿಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖ ನಡೆಸುತ್ತಿದ್ದಾರೆ.