ಅಪರಿಮಿತವಾಗಿ ಮಕ್ಕಳ ಸಾಗಾಟ: ಜಿಲ್ಲೆಯಲ್ಲಿ ಶಾಲಾ ವಾಹನಗಳು ಪೊಲೀಸರಿಂದ ತಪಾಸಣೆ
ಕಾಸರಗೋಡು: ಶಾಲಾ ವಾಹನಗಳಲ್ಲಿ ಅಪರಿಮಿತವಾಗಿ ಮಕ್ಕಳನ್ನು ಸಾಗಿಸಲಾಗುತ್ತಿದೆಯೆಂಬ ವರದಿಯ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಆರಂಭಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪರ ನಿರ್ದೇಶ ಪ್ರಕಾರ ಇಂದು ಬೆಳಿಗ್ಗೆ ಜಿಲ್ಲೆಯಾದ್ಯಂತ ಪೊಲೀಸರು ಶಾಲಾ ವಾಹನ ತಪಾಸಣೆ ಆರಂಭಿಸಿದ್ದಾರೆ. ಶಾಲಾ ಮಕ್ಕಳನ್ನು ಕರೆದೊಯ್ಯುವ ಆಟೋರಿಕ್ಷಾಗಳು, ಜೀಪುಗಳು, ಕಾರುಗಳು, ಆಟೋ ಟ್ಯಾಕ್ಸಿಗಳು ಶಾಲಾ ಬಸ್‌ಗಳು ಮೊದಲಾದ ವಾಹನಗಳು ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲೂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಪಾಸಣೆ ನಡೆಸಲಾಗುತ್ತಿದೆ.