ಅಪಹರಣಕ್ಕೊಳಗಾದ ಬಾಲಕಿ ಪತ್ತೆಯಾದರೂ ಅಪಹರಣಕಾರರ ಮಾಹಿತಿ ಇನ್ನೂ ಅಲಭ್ಯ

ಕೊಲ್ಲಂ: ಕೊಲ್ಲಂ  ಓಯೂರಿನಿಂದ ಕಾರಿನಲ್ಲಿ  ಬಂದ ತಂಡ ಅಪಹರಿಸಿದ ಆರು ವರ್ಷದ ಅಬಿಗೇಲ್ ಸಾರಾ ರೆಜಿ ಎಂಬ ಬಾಲಕಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಸಫಲರಾಗಿದ್ದರೂ, ಆಕೆಯನ್ನು ಅಪಹರಿಸಿದ ಅಪ ಹರಣಕಾರರ ಕುರಿತಾದ ಮಾಹಿತಿ ಪೊಲೀಸರಿಗೆ ಇನ್ನೂ ಲಭಿಲಿಲ್ಲ. ಮಾತ್ರವಲ್ಲ ಆ ಅಪಹರಣದಲ್ಲಿ ಕೆಲವೊಂದು ನಿಗೂಢತೆಗಳು ಅಡಗಿವೆಯೆಂಬ ಶಂಕೆಯೂ ಇನ್ನೊಂದೆಡೆ ಉಂಟಾಗಿದೆ. ಈ ತಿಂಗಳ ೨೭ರಂದು ಸಂಜೆ ಈ ಬಾಲಕಿ  ಸಹೋದರನ ಜತೆಗೆ ಟ್ಯೂಶನ್ ಕ್ಲಾಸ್‌ಗೆ ಹೋಗುತ್ತಿದ್ದ ದಾರಿ ಮಧ್ಯೆ ಕಾರಿನಲ್ಲಿ ಬಂದ ತಂಡ  ಅಪಹರಿಸಿ ಸಾಗಿತ್ತು. ಬಾಲಕಿಯ ಪತ್ತೆಗಾಗಿ ಪೊಲೀಸರು ಕೊಲ್ಲಂ ಜಿಲ್ಲೆಯಾದ್ಯಂತ ಜಾಲಾಡುವ ಮಧ್ಯೆ ಅಪಹರಣಕ್ಕೊಳಗಾದ ಬಾಲಕಿಯನ್ನು ನಿನ್ನೆ ಅಪರಾಹ್ನ ಕೊಲ್ಲಂ ಆಶ್ರಮ ಮೈದಾನದಲ್ಲಿ  ಅಪಹರಣ ಕಾರರು ಉಪೇಕ್ಷಿಸಿ ಅಲ್ಲಿಂದ ಪರಾರಿಯಾಗಿದ್ದರು. ಆ ಮೂಲಕ ಬಾಲಕಿಯ ಕುಟುಂಬ ಮತ್ತು ಊರವರಲ್ಲಿ ಉಂಟಾಗಿದ್ದ ಆತಂಕ ದೂರವಾಗಿ  ಸುಖಾಂತ್ಯ ಕಂಡಿದೆ.

ಆದರೆ ಆ ಬಾಲಕಿಯನ್ನು ಅಪಹರಿಸಿದವರನ್ನು ಪತ್ತೆಹಚ್ಚಲಾ ಗಲೀ ಕನಿಷ್ಠ ಮಾಹಿತಿ ಕಲೆಹಾಕ ಲಾಗಲೀ ಪೊಲೀಸರಿಗೆ ಈತನಕ ಸಾಧ್ಯವಾಗಿಲ್ಲ. ಹಣಕ್ಕಾಗಿ ಬಾಲಕಿ ಯನ್ನು ಅಪಹರಿಸಲಾಗಿದೆಯೆಂದು  ಹೇಳಲಾಗುತ್ತಿದ್ದರೂ, ಅದರ ಹಿಂದೆಯೂ ಭಾರೀ ನಿಗೂಢತೆಗಳು ಅಡಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.  ಕೊಲ್ಲಂ ಜಿಲ್ಲೆಯ ವ್ಯಕ್ತಿಯೋರ್ವನ ನೇತೃತ್ವದಲ್ಲಿ ಈ ಅಪಹರಣ ನಡೆದಿದೆಯೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಈ ಬಾಲಕಿಯನ್ನು ಕಳದವಾರ ಎರಡುಬಾರಿ ಅಪರಿಸುವ ಯತ್ನವೂ ನಡೆದಿತ್ತೆಂಬ ಮಾಹಿತಿಯೂ ಈಗ ಬೆಳಕಿಗೆ ಬಂದಿದೆ. ಅಪಹರಣಕಾರರು ಬಾಲಕಿ ಪ್ರಜ್ಞೆ ಕಳೆದುಕೊಳ್ಳಲು ಯಾವುದೋ ಅಮಲು ಪದಾರ್ಥ ನೀಡಿರಬಹುದೆಂಬ ಶಂಕೆಯೂ  ಉಂಟಾಗಿದೆ. ಆದ್ದರಿಂದ ಆಕೆಯ  ಮೂತ್ರ ಮತ್ತು ರಕ್ತದ ಸ್ಯಾಂಪಲ್  ತೆಗೆಯಲು  ಬಾಲಕಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆಕೆ ಈಗ  ಚೇತರಿಸಿಕೊಳ್ಳುತ್ತಿದ್ದಾಳೆ.

ಬಾಲಕಿಯನ್ನು ಅಪಹರಿಸಲು ಬಳಸಲಾದ ವಾಹನ  ನಂಬ್ರ ನಕಲಿಯಾಗಿರುವುದಾಗಿ ಪೊಲೀಸ್ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಅಪಹರಣಕಾರರಲ್ಲಿ ಒಳಗೊಂಡಿದ್ದ್ದ್ದ ಮಹಿಳೆ ಸೇರಿದಂತೆ ಇಬ್ಬರ ರೇಖಾಚಿತ್ರವನ್ನು ಪೊಲೀಸರು ಈಗಾಗಲೇ ತಯಾರಿಸಿದ್ದಾರೆ.ಈ ಬಾಲಕಿಯನ್ನು ಅಪಹರಿ ಸಿದ ಸ್ಥಳದಿಂದ ೧೦ ಕಿಲೋ ಮೀ ಟರ್ ದೂರದಲ್ಲಿರುವ  ಪ್ರದೇಶದ ೧೨ ವರ್ಷದ ಇನ್ನೋರ್ವೆ ಬಾಲಕಿ ಯನ್ನೂ ಅಪಹರಿಸುವ ಯತ್ನ ನಡೆ ದಿದೆ ಎಂಬುವುದಾಗಿ ಈಗ ಬೆಳಕಿಗೆ ಬಂದಿದೆ. ಈ ೧೨ ವರ್ಷದ ಬಾಲಕಿ ಆಕೆಯ ಮನೆಯ ಸಿಟೌಟ್‌ನಲ್ಲಿ ಕುಳಿತಿದ್ದ ವೇಳೆ  ಚೂಡಿದಾರ ಧರಿಸಿ, ಮುಖವನ್ನು ಬಟ್ಟೆಯಿಂದ ಮರೆ ಮಾಚಿ ಅಲ್ಲಿಗೆ ಬಂದ ಯುವತಿ ಯೋರ್ವೆ  ಬಾಲಕಿಯನ್ನು ಅಪಹರಿಸುವ ಯತ್ನ ನಡೆಸಿದ್ದಳು. 

Leave a Reply

Your email address will not be published. Required fields are marked *

You cannot copy content of this page