ಅಪಾಯಭೀತಿಯೊಡ್ಡುತ್ತಿದ್ದ ಕಟ್ಟಡಗಳು ನೆಲಸಮ: ಅವಶಿಷ್ಟಗಳು ಅಲ್ಲೇ ಬಾಕಿ; ವಿದ್ಯಾರ್ಥಿಗಳಿಗೆ ಸಮಸ್ಯೆ
ಕುಂಬಳೆ: ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಸಮೀಪ ಅಪಾಯ ಭೀತಿಯೊಡ್ಡುತ್ತಿದ್ದ ಎರಡು ಹಳೆಯ ಪ್ರವಾಸಿ ಬಂಗಲೆಗಳನ್ನು ತಿಂಗಳ ಹಿಂದೆ ಮುರಿಯಲಾಗಿದೆ. ಆದರೆ ಅದರ ಅವಶಿಷ್ಟಗಳು ಅಲ್ಲೇ ಉಳಿದುಕೊಂ ಡಿದ್ದು, ಅದು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿ ಕಾಡತೊಡಗಿದೆ. ಹಲವು ವರ್ಷಗಳ ಹಿಂದಿನ ಎರಡು ಪಿಡಬ್ಲ್ಯುಡಿ ರೆಸ್ಟ್ ಹೌಸ್ಗಳು ಯಾವುದೇ ಕ್ಷಣದಲ್ಲಿ ಮುರಿದುಬಿದ್ದು ಅಪಾಯ ಸಂಭವಿಸ ಬಹುದಾದ ಸ್ಥಿತಿಯಲ್ಲಿತ್ತು. ಈ ಬಗ್ಗೆ ನಾಗರಿಕರ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ತಿಂಗಳ ಹಿಂದೆ ಅದನ್ನು ಪಿಡಬ್ಲ್ಯುಡಿ ಮುರಿದಿ ದೆ. ಆದರೆ ಕಟ್ಟಡದ ಕಲ್ಲುಗಳು, ಉಪಯೋಗಶೂನ್ಯ ವಾದ ಮರಗಳು ಮೊದಲಾದ ಅವಶಿಷ್ಟಗ ಳನ್ನು ಅಲ್ಲಿಂದ ತೆರವು ಗೊಳಿಸಿಲ್ಲ. ಇದೇ ವೇಳೆ ಉಪಯೋ ಗಕ್ಕೆ ಬರುವ ಕಬ್ಬಿಣ ಮೊದಲಾದ ವುಗಳನ್ನು ಕೊಂಡೊ ಯ್ದಿರುವುದಾಗಿ ನಾಗರಿಕರು ತಿಳಿಸುತ್ತಿ ದ್ದಾರೆ. ಇದೀಗ ಉಳಿದ ಅವಶಿಷ್ಟ ಗಳಿಂದ ಸಮಸ್ಯೆ ಎದುರಾಗಿದೆ. ಶಾಲಾ ಮೈದಾನದ ಸಮೀಪದಲ್ಲೇ ಅವಶಿಷ್ಟಗಳಿದ್ದು, ಇದರಿಂದ ಮಕ್ಕಳಿಗೆ ತೀವ್ರ ಸಮಸ್ಯೆ ಗಳುಂಟಾಗಿದೆಯೆಂದು ದೂರಲಾಗಿದೆ.