ಅಪಾರ್ಟ್‌ಮೆಂಟ್‌ನಿಂದ 3 ಲಕ್ಷರೂ., ಐದು ಪವನ್ ಚಿನ್ನ ಕಳವು: ಕೇಸು ದಾಖಲು

ಕಾಸರಗೋಡು: ಅಪಾರ್ಟ್ ಮೆಂಟ್‌ನಿಂದ ನಗ-ನಗದು ಕಳವುಗೈಯ್ಯಲಾಗಿದೆ ಯೆಂದು ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಕಾಸರಗೋಡು ಕೋಟೆ ರಸ್ತೆ ರೋಯಲ್ ಪೋರ್ಟ್ ಅಪಾ ರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ  ರೆಹ್ಮತ್ ನಿಶಾಫ್ (34) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

2024 ಡಿಸೆಂಬರ್ 24ರ ಮೊದಲ ಯಾವುದೋ ದಿನ ತಮ್ಮ ಅಪಾರ್ಟ್‌ಮೆಂಟ್‌ನಿಂದ 3 ಲಕ್ಷ ರೂ. ನಗದು ಹಾಗೂ ಐದು ಪವನ್ ಚಿನ್ನದೊಡವೆ ಕಳವುಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ರಹ್ಮತ್ ನಿಶಾಫ್ ಆರೋಪಿಸಿದ್ದಾರೆ. ಮಾತ್ರವಲ್ಲ ಈ ಬಗ್ಗೆ ಓರ್ವನನ್ನು ಶಂಕಿಸುತ್ತಿರುವುದಾಗಿ ದೂರಿನಲ್ಲಿ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page