ಅಪೂರ್ವ ರೋಗ ಬಾಧಿಸಿ ಯುವತಿ ಸಂಕಷ್ಟದಲ್ಲಿ ಚಿಕಿತ್ಸೆಗಾಗಿ ದಾನಿಗಳ ಸಹಾಯ ಯಾಚಿಸುವ ಬಡ ಕುಟುಂಬ
ಅಡೂರು: ಮೂವತ್ತು ವರ್ಷ ಗಳಿಂದ ರೋಗ ಬಾಧಿಸಿ ಸಂಕಷ್ಟ ಎದುರಿಸುತ್ತಿರುವ ಯುವತಿ ದಾನಿಗಳ ಸಹಾಯ ಯಾಚಿಸುತ್ತಿದ್ದಾರೆ.
ದೇಲಂಪಾಡಿ ಪಂಚಾಯತ್ನ ಚಾಪೆಕಲ್ಲು ನಿವಾಸಿಯಾದ ಪುರುಷೋತ್ತಮ ಎಂಬವರ ಪತ್ನಿ ಚಾಂದಿನಿ ಮಾರಕ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದಾರೆ. ಈಗಾಗಲೇ ಹಲವು ಶಸ್ತ್ರಚಿಕಿತ್ಸೆ ನಡೆಸಿದ್ದು, ಕೃತಕ ಶ್ವಾಸೋಚ್ವಾಸ ನಡೆಸಲಾಗುತ್ತಿದೆ. ದೆಹಲಿಯ ಏಮ್ಸ್ನಲ್ಲಿ ನಡೆಸಿದ ತಪಾಸಣೆಯಲ್ಲಿ ಚಾಂದಿನಿಗೆ ಅಪೂರ್ವರೋಗ ಬಾಧಿಸಿರುವುದು ತಿಳಿದು ಬಂದಿದೆ. ರೋಗ ವಾಸಿ ಯಾಗಬೇಕಾದರೆ ಹೈದರಾಬಾದ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆಗೆ ೫೦ ಲಕ್ಷ ರೂಪಾಯಿ ಖರ್ಚು ತಗಲಬಹು ದೆಂದು ಅಂದಾಜಿಸಲಾಗಿದೆ. ಆದರೆ ಕೂಲಿ ಕೆಲಸ ನಿರ್ವಹಿಸಿ ಜೀವಿಸುವ ಕುಟುಂಬಕ್ಕೆ ಇಷ್ಟೊಂದು ಬೃಹತ್ ಮೊತ್ತವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಇದನ್ನು ಅರಿತು ಜನಪ್ರತಿನಿಧಿಗಳು ಹಾಗೂ ನಾಗರಿಕರು ಸೇರಿ ಚಿಕಿತ್ಸಾ ಸಹಾಯ ಸಮಿತಿ ರೂಪೀಕರಿಸಲಾಗಿದೆ. ಪಂಚಾಯತ್ ಕ್ಷೇಮ ಕಾರ್ಯ ಸಮಿತಿ ಅಧ್ಯಕ್ಷ ಎ. ಸುರೇಂದ್ರನ್ ಚೆಯರ್ಮೆನ್, ಸುಭಾಶ್ ವನಶ್ರೀ ಕನ್ವೀನರ್, ಬ್ಲೋಕ್ ಪಂಚಾಯತ್ ಸದಸ್ಯ ಚನಿಯ ನಾಯ್ಕ್ ಕೋಶಾಧಿಕಾರಿಯಾಗಿದ್ದಾರೆ. ಮೂರರ ಹರೆಯದ ಮಗಳಿಗೆ ತಾಯಿ ಮರಳಿ ಲಭಿಸಬೇಕಾದರೆ ಚಾಂದಿನಿಯ ರೋಗ ಗುಣವಾಗ ಬೇಕಾಗಿದೆ. ಅದಕ್ಕಾಗಿ ದಾನಿಗಳು ಸಹಾಯ ಹಸ್ತ ಚಾಚಿ ಸಹಕರಿಸಬೇಕೆಂದು ಸಮಿತಿ ಪದಾಧಿಕಾರಿಗಳು ವಿನಂತಿಸಿದ್ದಾರೆ. ಸಹಾಯಗಳನ್ನು ಕೇರಳ ಗ್ರಾಮೀಣ ಬ್ಯಾಂಕ್ ಅಡೂರು ಶಾಖೆಯ ೪೦೪೫೧೧೦೧೦ ೭೨೯೦೭ ಎಂಬ ಖಾತೆಗೆ ಕಳುಹಿಸಬಹುದು. ಐಎಫ್ಎಸ್ಸಿ ಕೋಡ್ ಕೆ.ಎಲ್.ಜಿ.ಬಿ ೦೦೪೦೪೫೧, ಗೂಗಲ್ ಪೇ ನಂಬ್ರ: ೮೯೨೧೯೮೫೪೧೯.