ಅಪ್ರಾಪ್ತರಿಗೆ ದೌರ್ಜನ್ಯ: ವೆಳ್ಳರಿಕುಂಡ್, ಚಂದೇರ ಠಾಣೆಗಳಲ್ಲಿ ಎರಡು ಪೋಕ್ಸೋ ಪ್ರಕರಣ ದಾಖಲು
ಹೊಸದುರ್ಗ: ತಾಯಿಯ ಗೆಳೆಯ 13ರ ಹರೆಯದ ಬಾಲಕಿಯನ್ನು ದೌರ್ಜನ್ಯಗೈದಿರುವುದಾಗಿ ದೂರಲಾಗಿದೆ. ಘಟನೆಯಲ್ಲಿ ವೆಳ್ಳರಿಕುಂಡ್ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆಗೆ ಚಾಲನೆ ನೀಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ವೆಳ್ಳರಿಕುಂಡ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 14ರ್ ಹರೆಯದ ಬಾಲಕನನ್ನು ಪ್ರಕೃತಿ ವಿರುದ್ಧ ದೌರ್ಜನ್ಯಕ್ಕೆ ಈಡುಗೊಳಿಸಿರುವುದಾಗಿ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿದ್ದಾರೆ. ದೂರುದಾರನಾದ ಬಾಲಕನ ಮನೆ ಬಳಿಯ ನಿವಾಸಿ 40ರ ಯುವಕನ ವಿರುದ್ಧ ಕೇಸು ದಾಖಲಿಸಲಾಗಿದೆ. ಈತನನ್ನು ಸೆರೆ ಹಿಡಿಯಲಾಗಿದೆ. ಹಣ ನೀಡಿದ ಬಳಿಕ ಬಾಲಕನನ್ನು ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.