ಅಬಕಾರಿ ದಾಳಿ: 86.4 ಲೀಟರ್ ಕರ್ನಾಟಕ ಮದ್ಯ ವಶ

ಕಾಸರಗೋಡು: ನಗರದ ಕರಂದಕ್ಕಾಡಿನಲ್ಲಿ ಅಬಕಾರಿ ತಂಡ ನಿನ್ನೆ ದಾಳಿ ನಡೆಸಿ ಅಲ್ಲಿ  ಬಚ್ಚಿಡಲಾಗಿದ್ದ 86.4 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ. ಆದರೆ ಈ ಸಂಬಂಧ ಯಾರನ್ನೂ  ಬಂಧಿ ಲಾಗಿಲ್ಲ.

ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟೀ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಜೇಮ್ಸ್ ಅಬ್ರಹಾಂ ಕುರಿಯಾರ ನೇತೃತ್ವದಲ್ಲಿ ಅಬಕಾರಿ ಕಾರ್ಯಾಚರಣೆ ನಡೆದಿದೆ. ಈ ಕಾರ್ಯಾಚರಣೆಯಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಮಂಜುನಾಥ ಎ, ಪ್ರಜಿತ್ ಕೆ.ಆರ್, ಚಾಲಕ ಕ್ರಿಸ್ಟಿನ್ ಪಿ.ಎ ಎಂಬವರು ಒಳಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page