ಅಬುದಾಬಿಯಲ್ಲಿ ಮೊದಲ ಹಿಂದೂ ದೇವಾಲಯ ೧೪ರಂದು ಪ್ರಧಾನಿಯಿಂದ ಉದ್ಘಾಟನೆ

ಅಬುದಾಬಿ: ಅಬುದಾಬಿಯಲ್ಲಿ ನಿರ್ಮಿಸಲಾದ  ಹಿಂದೂ ದೇವಾಲಯ ವನ್ನು ಫೆ.೧೪ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿ ಸಲಿದ್ದಾರೆ. ಈ ದೇವಾಲಯವನ್ನು ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್) ನಿರ್ಮಿಸಿದ್ದು, ಇದು ಯುಎಇಯ ಮೊದಲ ಸಾಂಪ್ರದಾ ಯಿಕ ಕಲ್ಲಿನ ಹಿಂದೂ ದೇವಾಲಯ ವಾಗಿದೆ. ಅಬು ಮುರೇಖಾ ಜಿಲ್ಲೆಯಲ್ಲಿ ೨೭ ಎಕ್ರೆ ಜಾಗದಲ್ಲಿ ಈ ದೇವಾಲಯ ತಲೆಯೆತ್ತಿದೆ. ಈ ದೇವಾಲಯದ ಉದ್ಘಾಟನೆಯನ್ನು ಸೌಹಾರ್ದತೆಯ ಹಬ್ಬದಂತೆ ಆಚರಿಸ ಲಾಗುತ್ತದೆ. ಎಲ್ಲಾ ತಲೆಮಾರುಗಳು ಮತ್ತು ಹಿನ್ನೆಲೆಗಳುಳ್ಳ ಜನರ ನಡುವೆ ಸಾಮರಸ್ಯವನ್ನು ಬೆಳೆಸುವುದು ಈ ಉದ್ಘಾಟನಾ ಕಾರ್ಯಕ್ರಮದ ಧ್ಯೇಯವಾಗಿದೆ ಎಂದು ಸ್ವಾಮಿನಾರಾ ಯಣ ಸಂಸ್ಥೆ ತಿಳಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯ ವರ ಈ ಭೇಟಿ ಭಾರತ ಮತ್ತು ಯುಎಇ ನಡುವಿನ ನಿಕಟ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ವಿಶ್ಲೇಷಿಸಲಾಗಿದೆ. ಪ್ರಧಾನಮಂತ್ರಿಯಾಗಿ ಯುಎಇಗೆ ಇದು ಮೋದಿಯವರ ೭ನೇ ಭೇಟಿಯಾಗಿದೆ.

Leave a Reply

Your email address will not be published. Required fields are marked *

You cannot copy content of this page