ಅಬ್ದುಲ್ ಅಸೀಸ್ ಮುಸ್ಲಿಯಾರ್ ನಿಧನ

ಕುಂಬಳೆ: ಪ್ರಮುಖ ದೀನಿ ಪಂಡಿತ ಮೊಗ್ರಾಲ್ ಮೈಮೂನ್ ನಗರದಲ್ಲಿ ವಾಸಿಸುವ ಅಂಗಡಿಮೊಗರು ಖಾಝಿ ಅಸೀಸ್ ಉಸ್ತಾದ್ ಎಂಬ ಹೆಸರಲ್ಲಿ ಕರೆಯಲ್ಪಡುವ ಅಬ್ದುಲ್ ಅಸೀಸ್ ಮುಸ್ಲಿಯಾರ್ (90) ನಿಧನಹೊಂದಿದರು. ಇವರು ದಿ| ಮೊಗ್ರಾಲ್ ಕೋಟೆ ಅಬ್ದುಲ್ ಖಾದರ್ ಮುಸ್ಲಿಯಾರ್‌ರ ಸಹೋದರಿಯ ಪತಿಯಾಗಿದ್ದಾರೆ.

ಮೃತರು ಪತ್ನಿ ಸೈನಬ, ಮಕ್ಕಳಾದ ಯೂನುಸ್, ಅನ್ಸಾರ್,ತಾಜುದ್ದೀನ್, ನೌಫಲ್, ನೌಶಾದ್, ಸಾಹಿದ, ನಸೀಮ, ಅಳಿಯ-ಸೊಸೆಯಂದಿರಾದ ಮುಹಮ್ಮದ್ ಮುಸ್ಲಿಯಾರ್ ಮದನಿ, ಇಬ್ರಾಹಿಂ ಉದುಮ, ಸಾಜಿದ ತಾಯಿಲಂಗಾಡಿ, ಅನೀಸ ಮೊಗ್ರಾಲ್, ಶಂಶಾದ್ ಪೈವಳಿಕೆ, ಶಂಸೀನ ಬಾಯಾರು, ನಸೀಬ, ಸಹೋದರ-ಸಹೋದರಿಯರಾದ ಎ.ಪಿ. ಆದಂ ಮಾಸ್ತರ್, ಆಸ್ಯಮ್ಮ, ಆಯಿಶ ಕಂಬಾರು  ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮೊಗ್ರಾಲ್ ಚಳಿಯಂಗೋಡು ಜುಮಾ ಮಸೀದಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ನಿಧಕ್ಕೆ ಮೊಗ್ರಾಲ್ ದೇಶಿಯ ವೇದಿ,  ದೀನಾರ್ ಯುವಜನ ಸಂಘ ಸಂತಾಪ ಸೂಚಿಸಿದೆ.

Leave a Reply

Your email address will not be published. Required fields are marked *

You cannot copy content of this page