ಅಮಾನ್ಯ 2000 ರೂ. ಮುಖಬೆಲೆಯ ಖೋಟಾನೋಟು ಪತ್ತೆ ಪ್ರಕರಣ :ಕ್ರೈಮ್ ಬ್ರಾಂಚ್ ತನಿಖೆ ಆರಂಭ
ಕಾಸರಗೋಡು: ಹೊಸದುರ್ಗ ತಾಲೂಕಿನ ಅಂಬಲತರ ಗುರುಪುರದ ಬಾಡಿಗೆ ಮನೆಯಲ್ಲಿ ಅಮಾನ್ಯಗೊಳಿಸಲಾದ 2000 ರೂ. ಮುಖಬೆಲೆಯ 6.99 ಕೋಟಿ ರೂ. ಗಳ ಖೋಟಾನೋಟುಗಳು ಪತ್ತೆಯಾದ ಪ್ರಕರಣವನ್ನು ಕ್ರೈಮ್ ಬ್ರಾಂಚ್ ಕೈಗೆತ್ತಿಕೊಂಡು ಸಮಗ್ರ ತನಿಖೆ ಆರಂಭಿಸಿದೆ. ಕ್ರೈಮ್ ಬ್ರಾಂಚ್ ಡಿವೈಎಸ್ಪಿ ಎಂ. ಸುನಿಲ್ ಕುಮಾರ್ರ ಮೇಲ್ನೋಟದಲ್ಲಿ ಕ್ರೈಮ್ ಬ್ರಾಂಚ್ ಇನ್ಸ್ಪೆಕ್ಟರ್ ಲಿಪಿನ್ರ ನೇತೃತ್ವದ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ.
2024 ಮಾರ್ಚ್ 20ರಂದು 2000 ರೂ. ಮುಖಬೆಲೆಯ 6.96 ಕೋಟಿ ಖೋಟಾನೋಟುಗಳನ್ನು ಗುರುಪುರದ ಬಾಡಿಗೆ ಮನೆಯೊಂದರಿAದ ಅಂಬಲತರ ಪೊಲೀಸರು ಪತ್ತೆಹಚ್ಚಿದ್ದರು. ಆ ಮನೆಯ ದೇವರ ಕೊಠಡಿ ಮತ್ತು ಇತರೆಡೆಗಳಲ್ಲಾಗಿ ಈ ಖೋಟಾನೋಟುಗಳನ್ನು ಬಚ್ಚಿಡಲಾಗಿತ್ತು. 28 ತಾಸುಗಳ ಕಾಲ 20 ಪೊಲೀಸರು ಸೇರಿ ಈ ನೋಟುಗಳನ್ನು ಎಣಿಸಬೇಕಾಗಿ ಬಂದಿತ್ತು. ಖೋಟಾ ನೋಟು ಪತ್ತೆಯಾದ ಆ ಮನೆಯನ್ನು ಅಬ್ದುಲ್ ರಜಾಕ್ ಎಂಬಾತ ಬಾಡಿಗೆ ಪಡೆದುಕೊಂಡಿದ್ದನು. ಸ್ನೇಹಿತ ಸುಲೈಮಾನ್ ಎಂಬಾತನಿಗಾಗಿ ಆತ ಈ ಮನೆಯನ್ನು ಬಾಡಿಗೆ ಪಡೆದುಕೊಂಡಿದ್ದನೆAದು ಪೊಲೀಸ್ ತನಿಖೆಯಲ್ಲಿ ಸ್ಪಷ್ಟಕೊಂಡಿತ್ತು. ಅಂದು ಅಲ್ಲಿಂದ ಜಾಗ ಖಾಲಿ ಮಾಡಿದ್ದ ಈ ಇಬ್ಬರನ್ನು ವಯನಾಡಿನ ರಿಸೋರ್ಟ್ ಒಂದರಿAದ ಪೊಲೀಸರು ನಂತರ ಬಂಧಿಸಿದ್ದರು. ಬಂಧಿತರನ್ನು ಪೊಲೀಸರು ಹೊಸದುರ್ಗ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ನ್ಯಾಯಾಲಯ ಅವರಿಬ್ಬರಿಗೆ ಅಂದೇ ಜಾಮೀನು ಮಂಜೂರು ಮಾಡಿತ್ತು.