ಅಮಿಬಿಕ್ ಮೆದುಳು ಜ್ವರ ತಗಲಿ ರಾಜ್ಯದಲ್ಲಿ ಮೂರನೇ ಸಾವು; ಚಿಕಿತ್ಸೆಯಲ್ಲಿ 12ರ ಬಾಲಕ ಮೃತ್ಯು
ಕಲ್ಲಿಕೋಟೆ: ಅಮಿಬಿಕ್ ಮೆದುಳು ಜ್ವರ ತಗಲಿ ರಾಜ್ಯದಲ್ಲಿ ಮತ್ತೊಂದು ಸಾವು ಸಂಭವಿಸಿದೆ. ಜ್ವರ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ರಾಮನಾಟುಕ್ಕರ ಫಾರೂಕ್ ಕಾಲೇಜು ಸಮೀಪದ ನಿವಾಸಿ ಅಜಿತ್ ಪ್ರಸಾದ್- ಜ್ಯೋತಿ ದಂಪತಿ ಪುತ್ರ ಇ.ಪಿ. ಮೃದುಲ್ (12) ಬುಧವಾರ ರಾತ್ರಿ ಮೃತಪಟ್ಟಿದ್ದಾನೆ. ಕಳೆದ 24ರಿಂದ ಗಂಭೀರ ಅವಸ್ಥೆಯಲ್ಲಿ ವೆಂಟಿಲೇಟ ರ್‌ನಲ್ಲಿರಿಸಲಾಗಿತ್ತು. ಫಾರೂಕ್ ಕಾಲೇಜು ಪರಿಸರದ ಐದನೇ ವಾರ್ಡ್‌ನಲ್ಲಿರುವ ಅಚ್ಚನ್‌ಕುಳದಲ್ಲಿ ಸ್ಥಾನ ಮಾಡಿದ ಬಳಿಕ ರೋಗ ಲಕ್ಷಣ ಕಂಡುಬಂದಿದೆ. ಫಾರೂಕ್ ಕಾಲೇಜ್ ಹೈಯರ್ ಸೆಕೆಂಡರಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಮೃತನು ತಂದೆ, ತಾಯಿ, ಸಹೋದರ ಮಿಲನ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾನೆ.
ಈತನ ಸಾವಿನೊಂದಿಗೆ ರಾಜ್ಯದಲ್ಲಿ ಅಮಿಬಿಕ್ ಮೆದುಳು ಜ್ವರ ತಗಲಿ ಮೃತಪಟ್ಟವರ ಸಂಖ್ಯೆ 3ಕ್ಕೇರಿದೆ. ಕಣ್ಣೂರು, ಮಲಪ್ಪುರಂ ನಿವಾಸಿಗಳು ಈ ಹಿಂದೆ ಈ ಜ್ವರಕ್ಕೆ ಬಲಿಯಾಗಿದ್ದರು.
ನೆಗ್ಲೆರಿಯಾ ಫೌಲೇರಿ ಎಂಬ ಅಮಿಬ ವಿಭಾಗಕ್ಕೊಳಪಟ್ಟ ರೋಗಾಣುಗಳು ಮೆದುಳಿಗೆ ಹಾನಿವುಂಟು ಮಾಡುವಾಗ ಉಂಟಾಗುವ ಒಂದು ರೋಗವಾಗಿದೆ ಅಮಿಬಿಕ್ ಮೆನಿಂಜೊ ಎನ್‌ಸೈಪಲೈಟಿಸ್ ಅಥವಾ ಅಮಿಬಿಕ್ ಮೆದುಳು ಜ್ವರ. ಕಟ್ಟಿ ನಿಲ್ಲುವ ನೀರಿನಲ್ಲಿ ಜೀವಿಸುವ ಅಮಿಬ ಮೂಗಿನ ಮೂಲಕ ಮನುಷ್ಯ ಶರೀರಕ್ಕೆ ಪ್ರವೇಶಿಸಿ ಮೆದುಳಿಗೆ ತಲುಪಿ ಗಂಭೀರ ರೋಗ ಸ್ಥಿತಿ ನಿರ್ಮಿಸುತ್ತಿದೆ.