ಅಯೋಧ್ಯೆಗೆ ತಲುಪಿದ ಕಲಶಯಾತ್ರೆ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ಆರಂಭ
ಅಯೋಧ್ಯೆ: ಅಯೋಧ್ಯೆ ಶ್ರೀರಾಮ ಕ್ಷೇತ್ರದಲ್ಲಿ ಜನವರಿ ೨೨ರಂದು ನಡೆಯಲಿರುವ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಪೂರ್ವ ಭಾವಿಯಾಗಿ ಕಲಶಯಾತ್ರೆಯನ್ನು ಅಯೋಧ್ಯೆಗೆ ತಲುಪಿಸಲಾಯಿತು.
ಪ್ರತಿಷ್ಠೆ ವೇಳೆ ಶ್ರೀರಾಮ ವಿಗ್ರಹದಲ್ಲಿ ಅಭಿಷೇಕ ನಡೆಸಲಿರುವ ಕಲಶಕ್ಕಾಗಿ ದೇಶದ ವಿವಿಧ ಪವಿತ್ರ ನದಿಗಳಿಂದ ಜಲ ಸಂಗ್ರಹಿಸಿ ಅದನ್ನು ಅಯೋಧ್ಯೆಗೆ ಶೋಭಾಯಾತ್ರೆ ಮೂಲಕ ತಲುಪಿಸಲಾಗಿದೆ.
೧೫೦ರಿಂದ ೨೦೦ ಕಿಲೋ ವರೆಗೆ ಭಾರವುಳ್ಳ ಕೃಷ್ಣ ಶಿಲೆಯನ್ನು ನಿರ್ಮಿಸಿದ ೫೧ ಇಂಚು ಎತ್ತರದ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡುವ ಕಾರ್ಯ ಇಂದು ನಡೆಯಲಿದೆ. ನಾಲ್ಕು ದಿನಗಳ ಕಾಲ ವಿಗ್ರಹವನ್ನು ಪೂಜಿಸಿದ ಬಳಿಕ ೨೨ರಂದು ಪ್ರಧಾನ ಕಾರ್ಯಕ್ರಮವಾದ ಪ್ರಾಣ ಪ್ರತಿಷ್ಠೆ ನಡೆಯಲಿದೆ.
೨೨ರಂದು ನಡೆಯುವ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಮುಖ್ಯ ಕಾರ್ಮಿಕತ್ವವನ್ನು ಪ್ರಧಾನ ಮಂತ್ರಿ ನರೇಂದ್ರಮೋದಿ ವಹಿಸುವರು. ೨೧ರಂದು ಅಯೋಧ್ಯೆಗೆ ತಲುಪುವ ನರೇಂದ್ರಮೋದಿ ಅಂದು ಕ್ಷೇತ್ರ ಸಂದರ್ಶನ ನಡೆಸಿ ಕಾರ್ಯಕ್ರಮಗಳ ಸಿದ್ಧತೆಗಳ ಅವಲೋಕನ ನಡೆಸುವರು.
ರಾಮಲಲ್ಲಾನ ಪ್ರಾಣ ಪ್ರತಿಷ್ಠೆಗೆ ಇನ್ನು ಕೇವಲ ಮೂರು ದಿನಗಳು ಬಾಕಿಯಿದ್ದು ಇದರಿಂದ ಗಣ್ಯರು ಸಹಿತ ಹಲವು ಮಂದಿ ಅಯೋಧ್ಯೆಯತ್ತ ತೆರಳತೊಡಗಿದ್ದಾರೆ. ಇದರಿಂದ ಅಯೋಧ್ಯೆ ನಗರದಲ್ಲಿ ಬಿಗಿ ಭದ್ರತೆ ಹೆಚ್ಚಿಸಲಾಗಿದೆ.