ಅರಿಬೈಲು ಭಜನಾ ಮಂದಿರದಲ್ಲಿ ತೈಲಚಿತ್ರ ಅನಾವರಣ, ಕಟ್ಟಡ ಉದ್ಘಾಟನೆ

ಕಡಂಬಾರು: ಅರಿಬೈಲು ಶ್ರೀ ನಾಗಬ್ರಹ್ಮ ಯುವಕ ಮಂಡಲದ ಆಶ್ರಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಭವನದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ತೈಲಚಿತ್ರ ಅನಾವರಣ ಹಾಗೂ ನೂತನ ಕಟ್ಟಡ ಉದ್ಘಾಟನೆ ವಿವಿಧ ಕಾರ್ಯಕ್ರಮ ಗಳೊಂದಿಗೆ ಆರಂಭಗೊಂಡಿತು. ಇದರಂಗವಾಗಿ ನಿನ್ನೆ ಸಂಜೆ ವಿವಿಧ ವೈದಿಕ ಕಾರ್ಯಕ್ರಮ, ರಾತ್ರಿ ಅನ್ನಸಂತರ್ಪಣೆ ಜರಗಿತು. ಇಂದು ಬೆಳಿಗ್ಗೆ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಬಳಿಕ ತೈಲಚಿತ್ರ ಅನಾವರಣ, ನೂತನ ಕಟ್ಟಡದ ಉದ್ಘಾಟನೆ ಜರಗಿತು.  ಮಧ್ಯಾಹ್ನ ಮಹಾಪೂಜೆ, ಮದ್ವ್ವಾಧೀಶ ರಾಮಕೃಷ್ಣ ಕಾಟುಕುಕ್ಕೆ ಇವರಿಂದ ದಾಸವಾಣಿ, ಅನ್ನಸಂತರ್ಪಣೆ  ಜರಗಿತು.

ಸಂಜೆ ೪ಕ್ಕೆ ಭಜನೆ, ೫.೩೦ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ರಾತ್ರಿ  ಅನ್ನಸಂತರ್ಪಣೆ, ನಾಟಕ ‘ಶಿವದೂತೆ ಗುಳಿಗೆ’ ಪ್ರದರ್ಶನಗೊಳ್ಳಲಿದೆ. ನಾಳೆ ಬೆಳಿಗ್ಗೆ ೬.೩೫ರಿಂದ ಏಕಾಹ ಭಜನೆ ಆರಂಭ, ಮಧ್ಯಾಹ್ನ ಮಹಾಪೂಜೆ, ೧ರಿಂದ ಅನ್ನಸಂತರ್ಪಣೆ, ಸಂಜೆ ೬.೩೦ಕ್ಕೆ ಮಹಾಪೂಜೆ, ರಾತ್ರಿ ೮ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ೨೬ರಂದು ಬೆಳಿಗ್ಗೆ ಭಜನಾ ಮಂಗಲ ನಡೆಯಲಿದೆ.   ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಅಧ್ಯಕ್ಷತೆ ವಹಿಸುವರು. ಸಹನಾ ಕುಂದರ್ ಉಡುಪಿ ಧಾರ್ಮಿಕ ಉಪನ್ಯಾಸ ನೀಡುವರು. ಅರಿಬೈಲು ಶ್ರೀ ನಾಗಬ್ರಹ್ಮ ದೇವಸ್ಥಾನದ ಆಡಳಿತ  ಮೊಕ್ತೇಸರ ರಾಧಾಕೃಷ್ಣ ಅರಿನಾಯ ಉಪಸ್ಥಿತರಿರುವರು. ಕರ್ನಾಟಕದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವೇದವ್ಯಾಸ ಕಾಮತ್ ಸಹಿತ ಹಲವು ಗಣ್ಯರು ಭಾಗವಹಿಸುವರು.

Leave a Reply

Your email address will not be published. Required fields are marked *

You cannot copy content of this page