ಅರ್ಧ ಬೆಲೆ ವಂಚನೆ: ಹಣದ ಲೆಕ್ಕಾಚಾರ ಸಂಗ್ರಹಕ್ಕೆ ತನಿಖಾ ತಂಡ ಚಾಲನೆ
ಮೂವಾಟುಪುಳ: ಅರ್ಧ ಬೆಲೆಗೆ ಸ್ಕೂಟರ್ ಮತ್ತಿತರ ಸಾಮಗ್ರಿಗಳನ್ನು ಒದಗಿಸುವುದಾಗಿ ಭರವಸೆಯೊಡ್ಡಿ ಹಲವರಿಂದ ಹಣ ಪಡೆದು ವಂಚಿಸಿದ ಪ್ರಕರಣದ ತನಿಖೆಯನ್ನು ಕ್ರೈಂಬ್ರಾಂಚ್ ತೀವ್ರಗೊಳಿಸಿದೆ.
ದೂರುಗಾರರಿಂದ ಹೇಳಿಕೆ ಹಾಗೂ ವಂಚನೆ ನಡೆದ ಹಣದ ಲೆಕ್ಕಾಚಾರ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಮೂವಾಟುಪುಳ ಸೀಡ್ ಸೊಸೈಟಿ ಪದಾಧಿಕಾರಿಗಳಾದ ಮೂವರನ್ನು ಇಂದು ತನಿಖೆಗೊಳಪಡಿ ಸಲಾಗುವುದು. ಸೀಡ್ ಸೊಸೈಟಿ ಮುಖಾಂತರ ಸಂಗ್ರಹಿಸಿದ ಹಣ ಹಾಗೂ ನೀಡಿದ ವಾಹನಗಳ ಲೆಕ್ಕಾಚಾರ ಸಂಗ್ರಹಿಸಲಾಗುವುದು. ವಂಚನೆಗೆ ಸಂಬಂಧಿಸಿ ಈಗಾಗಲೇ ಸೆರೆಗೀಡಾಗಿ ಮೂವಾಟುಪುಳ ಸಬ್ ಜೈಲಿನಲ್ಲಿರುವ ಅನಂತುಕೃಷ್ಣ ಎಂಬಾತನನ್ನು ಇತರ ಜಿಲ್ಲೆಗಳಿಂದ ಲಭಿಸಿದ ದೂರುಗಳಿಗೆ ಸಂಬಂಧಿಸಿ ತನಿಖೆಗೊಳಪಡಿಸಲು ತನಿಖಾ ತಂಡ ಆಲೋಚಿಸುತ್ತಿದೆ. ಅದಕ್ಕಾಗಿ ಈತನನ್ನು ಕಸ್ಟಡಿಗೆ ತೆಗೆಯಲು ನಿರ್ಧರಿಸಲಾಗಿದೆ.