ಅವಯವ ಸಾಗಾಟ ದಂಧೆ :ಸೂತ್ರಧಾರನ ಪತ್ತೆಗಾಗಿ ತನಿಖಾ ತಂಡ ಹೈದರಾಬಾದ್‌ಗೆ
ಕೊಚ್ಚಿ: ಅಂತಾರಾಷ್ಟ್ರೀಯ ಅವಯವ ಸಾಗಾಟ ಪ್ರಕರಣದ ತನಿಖೆಯನ್ನು ಹೈದರಾಬಾದ್‌ಗೆ ವಿಸ್ತರಿಸಲಾಗಿದೆ. ಪ್ರಕರಣದ ಪ್ರಥಮ ಆರೋಪಿ ಸಾಬಿತ್ ನಾಸರ್ ಅವ ಯವ ಸಾಗಾಟ ದಂಧೆಯೊಂದಿಗೆ ಮೊದಲು ನಂಟು ಹೊಂದಿರುವುದು ಹೈದರಾಬಾದ್‌ನಲ್ಲಾಗಿದೆ. ಈ ಹಿನ್ನೆಲೆಯಲ್ಲಿ ಆ ದಂಧೆಯ ಸೂತ್ರಧಾರನ್ನು ಪತ್ತೆಹಚ್ಚಲು ತನಿಖಾ ತಂಡ ಅತ್ತ ತೆರಳಿದೆ.
ಅವಯವ ಸಾಗಾಟ ದಂಧೆಯ ವಂಚನೆಯಲ್ಲಿ ಸಿಲುಕಿದ ಪಾಲ ಕ್ಕಾಡ್ ನಿವಾಸಿಯನ್ನು ತಮಿಳು ನಾಡಿನಿಂದ ಪತ್ತೆಹಚ್ಚಲು ಸಾಧ್ಯವಾ ಗಲಿಲ್ಲ. ಆತನ ಆರೋಗ್ಯ ಸ್ಥಿತಿ ಆತಂ ಕದಲ್ಲಿದೆ ಯೆಂದು ಹೇಳಲಾಗುತ್ತಿದೆ.
ಪೊಲೀಸರು ಹುಡುಕಿ ಬರುತ್ತಿರುವುದನ್ನು ತಿಳಿದ ಆತ ವಾಸವನ್ನು ತಮಿಳುನಾಡಿಗೆ ಬಲಾಯಿಸಿದ್ದನು. ಕಸ್ಟಡಿಯಲ್ಲಿರುವ ಸಜಿತ್ ಶ್ಯಾಂ ಹಾಗೂ ಸಬಿತ್ ನಾಸರ್‌ನನ್ನು ಇಂದು ತನಿಖಾ ತಂಡ ಒಟ್ಟಿಗೆ ಕುಳ್ಳಿರಿಸಿ ತನಿಖೆಗೊ ಳಪಡಿಸಿದೆ. ಇನ್ನೋರ್ವ ಆರೋಪಿ ಮಧು ಎಂಬಾತ ಇರಾನ್‌ನಲ್ಲಿದ್ದಾನೆ ನ್ನಲಾಗಿದೆ.