ಅಸೌಖ್ಯ: ಒಮಾನ್‌ನಿಂದ ಊರಿಗೆ ಬಂದ ವ್ಯಕ್ತಿ ಮೃತ್ಯು

ಕುಂಬಳೆ: ಅಸೌಖ್ಯದ ಹಿನ್ನೆಲೆಯಲ್ಲಿ ಒಮಾನ್‌ನಿಂದ  ಊರಿಗೆ ಬಂದ ವ್ಯಕ್ತಿ ಮೃತಪಟ್ಟರು. ಕುಂಬಳೆ ಕಳತ್ತೂರು ನಿವಾಸಿ ಇಸ್ಮಾಯಿಲ್ ಮುಹಮ್ಮದ್ (೪೩) ಮೃತಪಟ್ಟ ವ್ಯಕ್ತಿ. ಒಮಾನ್‌ನಲ್ಲಿ ಕಫ್ತೀರಿಯ ನೌಕರನಾಗಿದ್ದ  ಇವರಿಗೆ ಅಸೌಖ್ಯ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ  ಊರಿಗೆ ಬಂದಿದ್ದರು. ಮಸ್ಕತ್ ಕೆಎಂಸಿಸಿ ಮಂಜೇಶ್ವರ ಮಂಡಲ ಸಮಿತಿ ಸದಸ್ಯನಾಗಿದ್ದರು. ದಿ| ಮುಹಮ್ಮದ್-ಆಮಿನ ದಂಪತಿಯ ಪುತ್ರನಾದ ಮೃತರು ಪತ್ನಿ ಮಿಸ್ರಿಯ, ಮಕ್ಕಳಾದ ರಿಸಾನ್, ರಸೀನ್, ಸಹೋದರ-ಸಹೋದರಿ ಯರಾದ ರಫೀಕ್, ಅಶ್ರಫ್, ಇರ್ಷಾದ್, ಹಾರಿಸ್, ಖಾದರ್, ರಫಿಯ, ಹಸೀನಾ, ತಸ್ರಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page