ಅಸೌಖ್ಯ: ಲಾರಿ ಚಾಲಕ ನಿಧನ

ಕಾಸರಗೋಡು: ಕೂಡ್ಲು ಗುಡ್ಡೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಸಮೀಪದ ನಿವಾಸಿ ನಾರಾಯಣ ಪಾಟಾಳಿ ಟಿ. (೫೧) ಎಂಬವರ ನಿನ್ನೆ ಸಂಜೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಅಲ್ಪ ಕಾಲದಿಂದ ಅಸೌಖ್ಯದಿಂದಿದ್ದರು. ಇವರು ಈ ಹಿಂದೆ ಹಲವು ವರ್ಷಗಳ ಕಾಲ ಲಾರಿ ಚಾಲಕನಾಗಿ ದುಡಿದಿದ್ದರು. ದಿವಂಗತರಾದ ಪೇರಪ್ಪ ಪಾಟಾಳಿ- ಅಮ್ಮು ದಂಪತಿಯ ಪುತ್ರನಾದ ಮೃತರು ಸಹೋದರ- ಸಹೋದರಿ ಯರಾದ ರಾಮ ಪಾಟಾಳಿ, ಬಾಬು ಪಾಟಾಳಿ, ರಾಜೇಶ್, ಸಂಜೀವಿ, ಸೀತಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page