“ಅ. ೭ರಂದು ಇಸ್ರೇಲ್ ಮೇಲೆ ನಡೆದದ್ದು ಭಯೋತ್ಪಾದಕ ದಾಳಿ” :ಶಶಿ ತರೂರ್ ಹೇಳಿಕೆ ವಿರುದ್ದ ಮುಗಿಬಿದ್ದ ಮುಸ್ಲಿಂಲೀಗ್

ಕಲ್ಲಿಕೋಟೆ: ಅಕ್ಟೋಬರ್ ೭ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ್ದು ಭಯೋತ್ಪಾದಕ ದಾಳಿಯಾಗಿದೆ ಯೆಂದು ಕಾಂಗ್ರೆಸ್ ನೇತಾರ, ತಿರುವನಂತಪುರ ಸಂಸದ ಶಶಿ ತರೂರ್ ನೀಡಿದ ಹೇಳಿಕೆ ಮುಸ್ಲಿಂ ಲೀಗ್‌ನ್ನು ಗರಂಗೊಳಿಸಿದ್ದು, ಅದರ ಹೆಸರಲ್ಲಿ ಮುಸ್ಲಿಂ ಲೀಗ್ ನೇತಾರರು   ಮಾತ್ರವಲ್ಲ ಹಲವು ಮುಸ್ಲಿಂ ಸಂಘಟನೆಗಳ ನೇತಾರರು   ಶಶಿ ತರೂರ್‌ರ ವಿರುದ್ಧ ಮುಗಿಬಿದ್ದಿದ್ದಾರೆ.

ತನ್ನ ಹೇಳಿಕೆ ವಿರುದ್ಧ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ  ಅದರ ಸ್ಪಷ್ಟೀಕರಣ ನೀಡಿ ಶಶಿ ತರೂರ್ ರಂಗಕ್ಕಿಳಿದಿದ್ದು,  ಆ ಮೂಲಕ ಲೀಗ್‌ನ್ನು ಮತ್ತು ಮುಸ್ಲಿಂ ಸಂಘಟನೆಗಳ ಆಕ್ರೋಶವನ್ನು ತಣ್ಣಗಾಗಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.

 ಮುಸ್ಲಿಂ ಲೀಗ್‌ನ ರಾಜ್ಯ ಸಮಿತಿ ನೇತೃತ್ವದಲ್ಲಿ ಕಲ್ಲಿಕೋಟೆಯ ಕಡಪ್ಪು ರದಲ್ಲಿ ನಿನ್ನೆ ಪಾಲೆಸ್ತಿಗೆ ಬೆಂಬಲ  ನೀಡುವ ಬೃಹತ್ ರ‍್ಯಾಲಿ ಆಯೋಜಿಸಲಾಗಿತ್ತು. ಅದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಶಿ ತರೂರ್ ಅಕ್ಟೋಬರ್ ೭ರಂದು ಇಸ್ರೇಲ್ ವಿರುದ್ದ ಹಮಾಸ್ ನಡೆಸಿದ್ದು ಭಯೋತ್ಪಾದಕ ದಾಳಿಯಾಗಿದೆ. ಆ ದಾಳಿಯಲ್ಲಿ ಮಕ್ಕಳು ಮತ್ತು ಮಹಿಳೆ ಯರೂ ಸೇರಿದಂತೆ ೧೪೦೦ ಮಂದಿ ಸಾವನ್ನಪ್ಪಿದ್ದಾರೆ. ಅದು ಮಾನವೀಯತೆಗೆ ವಿರುದ್ಧವಾದ ದಾಳಿಯಾಗಿದೆ. ಅದನ್ನು ಇಡೀ ವಿಶ್ವವೇ ಖಂಡಿಸಿದೆ. ಆ ಬಳಿಕ ಹಮಾಸ್ ಮೇಲೆ ಇಸ್ರೇಲ್ ದಾಳಿ ಆರಂಭಿಸಿದೆ. ಅದೂ ಖಂಡನೀಯ. ಯುದ್ಧದಲ್ಲಿ ಉಭಯ ಭಾಗಗಳ ಸುಮಾರು ೬ ಸಾವಿರಕ್ಕೂ ಹೆಚ್ಚು ಮಂದಿ ಅಮಾಯಕರು ಸಾವನ್ನಪ್ಪಿದ್ದಾರೆ. ಇದು ವಿಶ್ವಸಂಸ್ಥೆಯ ಅಂಗೀಕೃತ ನೀತಿಯ ಉಲ್ಲಂಘನೆಯಾಗಿದೆ. ಆದ್ದರಿಂದ ಇಸ್ರೇಲ್ ಈಗ ಹಮಾಸ್ ಮೇಲೆ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸಬೇಕೆಂದು ಅವರು ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದರು.

ತರೂರ್‌ರ ಇಂತಹ ಹೇಳಿಕೆಗೆ ಆ ವೇದಿಕೆಯಲ್ಲೇ ಉಪಸ್ಥಿತರಿದ್ದ ಮುಸ್ಲಿಂ ಲೀಗ್‌ನ ಹಲವು ನೇತಾರರು ಖಾರವಾದ ರೀತಿಯಲ್ಲೇ ಪ್ರತಿಕ್ರಿಯೆ ನೀಡಿದ್ದರು. ಆ ಬಳಿಕ ತರೂರ್‌ರ ವಿರುದ್ದ ಲೀಗ್ ಮತ್ತು ಇತರ ಹಲವು ಮುಸ್ಲಿಂ ಸಂಘಟನೆಗಳೂ ಪ್ರತ್ಯಕ್ಷವಾಗಿ ರಂಗಕ್ಕಿಳಿದಿದ್ದು, ಅದರಿಂ ದಾಗಿ ಅವರನ್ನು ಸಮಾಧಾನಪಡಿಸಲು ತರೂರ್ ಈಗ ಹೊಸ ಸ್ಪಷ್ಟೀಕರಣ ಗಳೊಂದಿಗೆ ರಂಗಕ್ಕಿಳಿದಿದ್ದಾರೆ.

Leave a Reply

Your email address will not be published. Required fields are marked *

You cannot copy content of this page