ಆಟವಾಡಲೆಂದು ಹೋದ ವಿದ್ಯಾರ್ಥಿ ನಾಪತ್ತೆ
ಉಪ್ಪಳ: ಆಟವಾಡಲೆಂದು ಮನೆಯಿಂದ ತೆರಳಿದ ಪ್ಲಸ್ವನ್ ವಿದ್ಯಾರ್ಥಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ.
ಪಚ್ಲಂಪಾರೆ ಅಂಗನವಾಡಿ ಬಳಿಯ ಹಂಸಾದ್ ಅಲಿ ಎಂಬವರ ಪುತ್ರ ಮೊಹಮ್ಮದ್ ಕೈಫ್ (16) ನಾಪತ್ತೆಯಾಗಿ ದ್ದಾನೆ. ಈತ ಮಂಗಲ್ಪಾಡಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ವನ್ ವಿದ್ಯಾರ್ಥಿಯಾಗಿದ್ದಾನೆ. ಈ ತಿಂಗಳ 10ರಂದು ಬೆಳಿಗ್ಗೆ 11ಕ್ಕೆ ಆಟವಾಡಲೆಂದು ತಿಳಿಸಿ ಮನೆಯಿಂದ ತೆರಳಿದ್ದಾನೆನ್ನಲಾಗಿದೆ. ಬಳಿಕ ಮನೆಗೆ ಮರಳಿ ಬಂದಿಲ್ಲ. ಈ ಹಿನ್ನೆಲೆಯಲ್ಲಿ ತಂದೆ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.