ಆಟೋರಿಕ್ಷಾ ಚಾಲಕ ನಿಧನ
ಮಂಜೇಶ್ವರ: ತೂಮಿನಾಡು ನಿವಾಸಿ ಆಟೋರಿಕ್ಷಾ ಚಾಲಕ ನಾರಾಯಣ (50) ನಿಧನರಾದರು. ಹಲವು ವರ್ಷಗಳಿಂದ ಇವರು ತೂಮಿನಾಡುನಲ್ಲಿ ಆಟೋರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು. ಮೃತರು ತಂದೆ ಪೂವಪ್ಪ, ಪತ್ನಿ ಪ್ರಮೀಳ, ಮಕ್ಕಳಾದ ಮೋನಿಕ, ಮೋಕ್ಷಿತ್, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. ನಿಧನಕ್ಕೆ ತೂಮಿನಾಡು ಆಟೋರಿಕ್ಷಾ ಚಾಲಕರು, ಸಾರ್ವಜನಿಕ ಶ್ರೀ ಮಹಾಕಾಳಿ ಭಜನಾ ಮಂದಿರ ಹಾಗೂ ಬ್ರಹ್ಮಶ್ರೀ ಮೊಗೇರ ಮಹಾ ಕಾಳಿ ದೈವಸ್ಥಾನ ತೂಮಿನಾಡು ಸಂತಾಪ ಸೂಚಿಸಿದೆ.