ಆಟೋ-ಕಾರು ಢಿಕ್ಕಿ ನಾಲ್ವರಿಗೆ ಗಾಯ
ಕುಂಬಳೆ: ಕಾರು ಹಾಗೂ ಆಟೋರಿಕ್ಷಾ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದು, ಆಟೋ ಚಾಲಕನನ್ನು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಕುಂಬಳೆ ಪೆಟ್ರೋಲ್ ಬಂಕ್ ಸಮೀಪ ಅಪಘಾತ ಸಂಭವಿಸಿದೆ. ಆಟೋ ಚಾಲಕ ದೇವಿನಗರ ನಿವಾಸಿ ಮುರಳಿ (೩೫)ರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಚೆಟ್ಟಂಗುಳಿ ನಿವಾಸಿಗಳಾದ ಅಬ್ದುಲ್ಲ (೬೭), ಮೊಹಮ್ಮದ್ ಹಾಜಿ (೮೧), ಅಬ್ದು (೫೫)ರನ್ನು ಕುಂಬಳೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.