ಆನ್ಲೈನ್ ಟ್ರೇಡಿಂಗ್: ಅಂಗಡಿಮೊಗರು ನಿವಾಸಿಯ42,41,000 ರೂ. ಲಪಟಾವಣೆ


ಕಾಸರಗೋಡು: ಆನ್ಲೈನ್ ಟ್ರೇಡಿಂಗ್ನ ಹೆಸರಲ್ಲಿ ಅಂಗಡಿಮೊಗರು ನಿವಾಸಿಯ 42,41,000 ರೂಪಾಯಿ ಲಪಟಾಯಿಸಿರುವುದಾಗಿ ದೂರಲಾಗಿದೆ. ಅಂಗಡಿಮೊಗರು ಖತೀಬ್ನಗರ ನಾಸ್ ಮಂಜಿಲ್ನ ಚಾಕಟ್ಟಚ್ಚಾಲ್ ಅಬೂಬಕ್ಕರ್ (73) ಎಂಬವರ ಹಣ ನಷ್ಟಗೊಂಡಿದೆ. 2025 ಫೆ.9ರಂದು ಆನ್ಲೈನ್ ಟ್ರೇಡಿಂಗ್ ಎಂದು ತಿಳಿಸಿ ದೂರುದಾತನನ್ನು ವಾಟ್ಸಪ್ನಲ್ಲಿ ಪರಿಚಯಗೊಂಡಿರುವುದಾಗಿ ಹೇಳಲಾಗುತ್ತಿದೆ. ಧನಿ-ಟಿಆರ್ಡಿ ಎಂಬ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಸಿದ ಬಳಿಕ ಎಪ್ರಿಲ್ 4ರಿಂದ 21ರವರೆಗಿನ ತಾರೀಕುಗಳಲ್ಲಾಗಿ ಹಣ ಕಳುಹಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆದರೆ ಠೇವಣಿ ಮೊತ್ತ ಹಾಗೂ ಅದರ ಲಾಭವನ್ನು ನೀಡದ ಹಿನ್ನೆಲೆಯಲ್ಲಿ ಅಬೂಬಕ್ಕರ್ ದೂರು ನೀಡಿದ್ದಾರೆ. ಸೈಬರ್ ಪೊಲೀಸ್ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page