ಆನ್‌ಲೈನ್ ಮೂಲಕ 31.92 ಲಕ್ಷ ರೂ. ವಂಚನೆ: ನಾಲ್ವರು ಸೆರೆ

ಕಾಸರಗೋಡು: ಆನ್ಲೈನ್ ಮೂಲಕ 31,92,785 ರೂ. ಪಡೆದು ಬಳಿಕ ವಂಚನೆ ನಡೆಸಿದ ಪ್ರಕರಣದ ನಾಲ್ವರನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ.
ಮಲಪ್ಪುರA ತಾನೂರು ಪುದಿಯ ಕಡಪ್ಪುರದ ಅಂಜುಡಿಯ ಮುಕ್ಕಾಟಿಲ್ ಹೌಸ್ನ ರಿಸಾನ್ ಮುಬಾಶೀರ್ (23), ತಾನೂರು ಕೋರ್ಮಂದಲದ ಪುರಂuಟಿಜeಜಿiಟಿeಜ ಪುರಕ್ಕಲ್ನ ಪಿ.ಪಿ. ಅರ್ಸನ್ ಮೋನ್ (24), ಪರ್ಯಾಪುರಂ ಮೋಯಿಕ್ಕಲ್ ಅಟೋಂಬುರ ಫಾರೂಕ್ಪಳ್ಳಿ ಎಂ. ಅಸೀಸ್ (31) ಮತ್ತು ಕೋರ್ಮನ್ ಕಡಪ್ಪುರಂ ಚೆಕ್ಕಿಡಂಡೆ ಪುರಯಿಲ್ ಸಿ.ಪಿ. ತಾಜುದ್ದೀನ್ (ಸಾಜು 40) ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ.
ಬೇಕಲ ಡಿವೈಎಸ್ಪಿ ಜಯನ್ ಡೋಮಿನಿಕ್ರ ನೇತೃತ್ವದ ಪೊಲೀಸರು ಇವರನ್ನು ಬಂಧಿಸಿದ್ದಾರೆ. ತೃಕ್ಕನ್ನಾಡ್ ಮಾರಾನ್ ವಳಪ್ಪಿನ ಶಿವಗಿರಿಯಿಲ್ ಸಂಜಯ್ ಕುಮಾರ್ಕೃಷ್ಣ ಎಂಬವರು ನೀಡಿದ ದೂರಿನ ಪ್ರಕಾರ ಬೇಕಲ ಪೊಲೀಸರು ನಾಲ್ವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆನ್ಲೈನ್ ವ್ಯವಹಾರದಲ್ಲಿ ಭಾರೀ ಲಾಭ ನೀಡಲಾಗುವುದಾಗಿ ನಂಬಿಸಿ ಟ್ರೈಡಿಂಗ್ ಆಫ್ ಮೂಲಕ 2024 ಜನವರಿ 8ರಿಂದ ಫೆಬ್ರವರಿ 6ರ ತನಕ ಅವಧಿಯಲ್ಲಿ ವಿವಿಧ ಖಾತೆಗಳ ಮೂಲಕ ತನ್ನಿಂದ 31,92,785 ರೂ. ಪಡೆದ ಬಳಿಕ ಅದರ ಲಾಭಾಂಶವನ್ನಾಗಲೀ, ನೀಡಿದ ಹಣವನ್ನಾಗಲೀ ಹಿಂತಿರುಗಿಸದೆ ತನ್ನನ್ನು ವಂಚಿಸಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂಜಯ್ ಕುಮಾರ್ಕೃಷ್ಣ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬAಧಿಸಿ ಈ ನಾಲ್ವರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಳಿಕ ಹೊಸದುರ್ಗ ಮೆಜಿಸ್ಟ್ರೇಟ್ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಬೇಕಲ ಪೊಲೀಸ್ ಇನ್ಸ್ಪೆಕ್ರ್ ಎಸ್. ಅರುಣ್ ಷಾ, ಎಎಸ್ಐಗಳಾದ ಜೋಸೆಫ್, ಜಯಪ್ರಕಾಶ್, ಸಿವಿಲ್ ಪೊಲೀಸ್ ಆಫೀಸರ್ಗಳಾದ ದೀಪಕ್, ರಾಗೇಶ್ ಮತ್ತು ಸೀಮ ಎಂಬವರು ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡದಲ್ಲಿ ಒಳಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page