ಆನ್ಲೈನ್ ವಂಚನೆ: ತನಿಖೆಗೆ ಬಂದ ಇನ್ಸ್ಪೆಕ್ಟರ್ ಸಹಿತ ಪೊಲೀಸರಿಗೆ ಕಾರು ಢಿಕ್ಕಿ ಹೊಡೆಸಿ ಆರೋಪಿ ಪರಾರಿ
ಕಾಸರಗೋಡು: ಆನ್ಲೈನ್ ಟ್ರೇಡಿಂಗ್ ವ್ಯಾಪಾರದ ಹೆಸರಲ್ಲಿ ಹಣ ಎಗರಿಸಿದ ಪ್ರಕರಣದ ಆರೋಪಿಯ ಬಂಧನಕ್ಕಾಗಿ ಬಂದ ಇನ್ಸ್ಪೆಕ್ಟರ್ರ ನ್ನೊಳ ಗೊಂಡ ಪೊಲೀಸರಿಗೆ ಆರೋಪಿ ಕಾರು ಢಿಕ್ಕಿ ಹೊಡೆಸಿ ಗಾಯಗೊಳಿಸಿ ಆರೋಪಿ ಪರಾರಿಯಾದ ಘಟನೆ ಮೇಲ್ಪರಂ ಬದ ಕೈನೋತ್ತ್ನಲ್ಲಿ ನಡೆದಿದೆ. ಪಾಲ್ಘಾಟ್ ಜಿಲ್ಲೆಯ ಮಂಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪಿ. ಪ್ರತಾಪ್, ಸಿವಿಲ್ ಪೊಲೀಸ್ ಆಫೀಸರ್ಗಳಾದ ಸಿ. ಸುಧೀಶ್, ಕೆ. ಸತೀಶ್ ಕುಮಾರ್ ಎಂಬಿ ವರಿಗೆ ಆರೋಪಿ ಕಾರು ಢಿಕ್ಕಿ ಹೊಡೆ ಸಿದ್ದಾನೆ. ಇದರಿಂದ ಗಾಯಗೊಂಡ ಪೊಲೀಸರಿಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಆನ್ಲೈನ್ ಟ್ರೇಡಿಂಗ್ನ ಮೂಲಕ ಭಾರೀ ಲಾಭ ನೀಡಲಾಗು ವುದೆಂದು ನಂಬಿಸಿ ಪಾಲ್ಘಾಟ್ನ ಮಣ್ಣೂರು ನಿವಾಸಿ ಮೋಹನದಾಸ್ ಎಂಬವ ರಿಂದ ಆನ್ಲೈನ್ ಮೂಲಕ 3.24 ಲಕ್ಷ ರೂಪಾಯಿ ಪಡೆದು ವಂಚಿಸಿದ ದೂರಿನಂತೆ ಮಂಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿ ದೆ. ಈ ಬಗ್ಗೆ ಪೊಲೀಸರು ನಡೆಸಿದ ತನಿಖೆಯಲ್ಲಿ ಆ ಹಣ ಮೇಲ್ಪರಂಬ ಕೈನೋತ್ತ್ನ ಮುಹಮ್ಮದ್ ಅಜ್ಮಲ್ ಎಂಬಾತನ ಎಸ್ಬಿಐ ಉದುಮ ಶಾಖೆಯ ಖಾತೆಗೆ ಠೇವಣಿಯಾಗಿರು ವುದಾಗಿ ಸ್ಪಷ್ಟಗೊಂಡಿತ್ತು. ಅದರಂತೆ ಆತನ ಪತ್ತೆಗಾಗಿ ಮಂಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಇಬ್ಬರು ಪೊಲೀಸರು ನಿನ್ನೆ ಬೆಳಿಗ್ಗೆ ಉದುಮ ಎಸ್ಬಿಐ ಬ್ಯಾಂಕ್ ಶಾಖೆಗೆ ತಲುಪಿ ಮಾಹಿತಿಗಳನ್ನು ಸಂಗ್ರಹಿಸಿದ್ದರು. ಬಳಿಕ ಮಧ್ಯಾಹ್ನ ವೇಳೆ ಕೈನೋತ್ತ್ನಲ್ಲಿರುವ ಅಜ್ಮಲ್ನ ಮನೆಗೆ ತಲುಪಿದ್ದರು. ಆತನನ್ನು ವಿಚಾರಣೆಗೊಳಪಡಿಸಿದಾಗ ವ್ಯವಹಾರದಿಂದ ತನಗೆ ಸಣ್ಣ ಲಾಭ ಮಾತ್ರವೇ ಲಭಿಸಿದೆ. ಇಬ್ರಾಹಿಂ ಎಂಬಾತ ಇದರ ಸೂತ್ರಧಾರ ನಾಗಿದ್ದಾನೆಂದು ಅಜ್ಮಲ್ ತಿಳಿಸಿದ್ದಾನೆ. ಇದರಂತೆ ಬಾದುಷಾನನ್ನು ಸೆರೆಹಿಡಿಯಲೆಂದು ಪೊಲೀಸರು ಹೋದಾಗ ಆತ ಕಾರಿನಲ್ಲಿ ತಲುಪಿ ಪೊಲೀಸರ ಮೇಲೆ ಢಿಕ್ಕಿ ಹೊಡೆಸಿ ಪರಾರಿಯಾಗಿ ದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಮೇಲ್ಪರಂಬ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.