ಆನ್ಲೈನ್ ವ್ಯಾಪಾರದ ಹೆಸರಲ್ಲಿ 19.85 ಲಕ್ಷ ರೂ. ಲಪಟಾವಣೆ : ಕೇಸು ದಾಖಲು
ಕಾಸರಗೋಡು: ಆನ್ಲೈನ್ ಮೂಲಕ ವ್ಯಾಪಾರದ ಹೆಸರಲ್ಲಿ ಯುವಕನೋರ್ವನಿಂದ 19.85 ಲಕ್ಷ ರೂ. ಪಡೆದು ಬಳಿಕ ವಂಚಿಸಿದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ.
ಮಧೂರು ಸಮೀಪದ ಅಲ್ತಾಫ್ ಮಹಲ್ನ ಅಬೂಬಕರ್ ಅನಸ್ (23) ಎಂಬಾತ ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಕೇಸು ದಾಖಲಿಸಿ ಸೈಬರ್ ಸೆಲ್ ಪೊಲೀಸರ ಸಹಾಯದೊಂದಿಗೆ ತನಿಖೆ ಆರಂಭಿಸಿದ್ದಾರೆ. ವಾಟ್ಸಪ್, ಇನ್ಸ್ಟಾಗ್ರಾಂ ಇತ್ಯಾದಿ ನವಮಾ ಧ್ಯಮಗಳ ಮೂಲಕ ಪರಿಚಯ ಗೊಂಡ ಆನ್ಲೈನ್ ವಂಚಕರು ಆನ್ಲೈನ್ ಕ್ರಿಫ್ಟೋ ಟ್ರೇಡಿಂಗ್ ಮಾರ್ಕೆಟಿಂಗ್ ಮೂಲಕ ಭಾರೀ ಲಾಭ ನೀಡುವ ಭರವಸೆ ನೀಡಿ 2024 ಡಿಸೆಂಬರ್ 3ರಿಂದ 2025 ಮಾರ್ಚ್ 6ರ ನಡುವಿನ ಅವಧಿ ಯಲ್ಲಿ ತನ್ನಿಂದ ಆನ್ಲೈನ್ ಮೂಲಕ 19,85,232 ರೂ. ಪಡೆದು ನಂತರ ಲಾಭವನ್ನಾಗಲೀ, ಪಡೆದ ಹಣವ ನ್ನಾಗಲೀ ಹಿಂತಿರುಗಿಸದೆ ವಂಚಿಸಿರು ವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಅನಸ್ ತಿಳಿಸಿದ್ದಾರೆ.